ವಿಶ್ವ ಟಿ20: ಸೆಮಿಫೈನಲ್ ತಲುಪಿದ ಭಾರತ ಮಹಿಳಾ ತಂಡ

ಗಯಾನ: ಮಿಥಾಲಿ ರಾಜ್ ಅವರ ಅರ್ಧ ಶತಕದ ನೆರವಿನಿಂದ ಭಾರತ ವನಿತೆಯರ ತಂಡ ದುರ್ಬಲ್ ಐರ್ಲೆಂಡ್ ವಿರುದ್ಧ ನಿರೀಕ್ಷಿತಾವಾಗಿ 52 ರನ್‍ಗಳ ಭರ್ಜರಿ ಗೆಲುವು ದಾಖಲಿಸಿ ವಿಶ್ವ ಮಹಿಳಾ ಟಿ20 ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಸೆಮಿಫೈನಲ್‍ನಲ್ಲಿ ಆಸ್ಟ್ರೇಲಿಯಾ ತಂಡವನ್ನ ಎದುರಿಸುವ ಸಾಧ್ಯತೆ ಇದೆ.

ಇಲ್ಲಿನ ಗಯಾನ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದಿ ಐರ್ಲೆಂಡ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕ ಬ್ಯಾಟ್ಸ್‍ಮನ್ ಮಿಥಾಲಿ ರಾಜ್ (51) ಮತ್ತು ಸ್ಮøತಿ ಮಂದಾನ (33)ಮೊದಲ ವಿಕೆಟ್ 67 ರನ್‍ಗಳ ಜೊತೆಯಾಟ ನೀಡಿದರು. ನಂತರ ಬಂದ ಜಿಮ್ಮಿ ರೊಡ್ರಿಗಸ್ 18, ಹರ್ಮನ್ ಪ್ರೀತ್ ಕೌರ್ 7, ದೀಪ್ತೀ ಶಮಾ 11 ರನ್ ಬಾರಿಸಿದ್ದು ಬಿಟ್ಟರೇ ಬೇರ್ಯಾವ ಆಟಗಾರ್ತಿಯರು ಅಬ್ಬರಿಸಲಿಲ್ಲ.ಕೊನೆಯಲ್ಲಿ ನಿಗದಿತ ಓವರ್‍ನಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು.

145 ರನ್‍ಗಳ ಸವಾಲಿನ ಮೊತ್ತ ಬೆನ್ನತ್ತಿದ ಐರ್ಲೆಂಡ್‍ಗೆ ಕ್ಲಾರೆ ಶಿಲ್ಲಿಂಗ್ಟನ್23 ಮತ್ತು ಇಸೊಬೆಲ್ ಜೊಯ್ಸೆ 33 ರನ್ ಹೊಡೆದಿದ್ದು ಬಿಟ್ಟರೇ ಬೇರೆ ಯಾವ ಬ್ಯಾಟ್ಸ್‍ಮನ್‍ಗಳು ಹೆಚ್ಚು ನಿಲ್ಲಲ್ಲಿ. ಕೊನೆಯಲ್ಲಿ ಐರ್ಲೆಂಡ್ ನಿಗದಿತ ಓವರ್‍ನಲ್ಲಿ 8 ವಿಕೆಟ್ ನಷ್ಟಕ್ಕೆ 93 ರನ್‍ಗಳಿಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ