ರಣವೀರ್​ ಸಿಂಗ್- ದೀಪಿಕಾ ದಂಪತಿಯ ಮದುವೆ ಸಿಕ್ರೇಟ್​ ಕೊನೆಗೂ ಬಯಲಾಯ್ತು! ಅದೇನು ಗೊತ್ತಾ?

ಹೊಸದಿಲ್ಲಿ: ಅನುಷ್ಕಾ ಶರ್ಮಾ ಹಾಗೂ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ತಮ್ಮ ಮದುವೆಯನ್ನು ಹೆಚ್ಚು ಖಾಸಗಿಯಾಗಿ ನಡೆಸಲು ಇಟಲಿಗೆ ಹಾರಿದ್ದರು. ರಣವೀರ್​ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ ಕೂಡ ಇದೇ ಮಾರ್ಗ ಅನುಸರಿಸಿದ್ದಾರೆ. ಇಟಲಿಯ ಲೇಕ್​ ಕೊಮೊದಲ್ಲಿರುವ ವಿಲ್ಲಾ ಡೆಲ್ ಬಾಲ್ಬೆನೆಲ್ಲೋ ರೆಸಾರ್ಟ್​​ನಲ್ಲಿ ಬುಧವಾರ ಮುಂಜಾನೆ 7 ಗಂಟೆಗೆ ಕೊಂಕಣಿ ಶೈಲಿಯಂತೆ ಈ ಜೋಡಿ ಹಸೆಮಣೆ ಏರಿದೆ. ಆದರೆ, ಅವರಂದುಕೊಂಡಂತೆ ಈ ಮದುವೆ ರಹಸ್ಯವಾಗಿ ಉಳಿದಿಲ್ಲ! ಅಂದರೆ, ಇಬ್ಬರೂ ಮದುವೆ ಮನೆಯಲ್ಲಿ ಹೇಗೆ ಕಾಣಿಸಿಕೊಂಡಿದ್ದರು ಎಂಬುದುರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

ಕೇವಲ 40 ಮಂದಿ ಮಾತ್ರ ವಿವಾಹಕ್ಕೆ ಹಾಜರಿ ಹಾಕಿದ್ದರು. ಬುಧವಾರ ಬೆಳಗ್ಗೆ 7 ಗಂಟೆಗೆ ಕೊಂಕಣಿ ಸಂಪ್ರದಾಯದಂತೆ ಈ ಜೋಡಿ ಹಸೆಮಣೆ ಏರಿತು. ಮದುವೆಗೆ ಬಂದ ಅತಿಥಿಗಳು ಯಾವುದೇ ಫೋಟೋ ತೆಗೆಯಬಾರದು ಎನ್ನುವ ಕಟ್ಟಾಜ್ಞೆ ಇತ್ತು. ಆದರೆ ಕೆಲವರು ರಣವೀರ್​ ಹಾಗೂ ದೀಪಿಕಾ ಅವರ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ  ದಂಪತಿ ಮದುವೆ ಮನೆಯಲ್ಲಿ ಹೇಗೆ ಕಾಣಿಸಿಕೊಂಡಿದ್ದರು ಎನ್ನುವ ರಹಸ್ಯ ಬಯಲಾಗಿದೆ. ಫೋಟೋ ನೋಡಿ ಅವರ ಅಭಿಮಾನಿಗಳು ಸಖತ್​ ಖುಷಿಯಾಗಿದ್ದಾರೆ. ಶೀಘ್ರದಲ್ಲೇ ಈ ಜೋಡಿ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಇಂದು ಸಿಂಧಿ ಸಂಪ್ರದಾಯದಂತೆ ರಣವೀರ್​-ದೀಪಿಕಾ ವಿವಾಹ ನೆರವೇರಲಿದೆ. ಶಾರುಖ್​ ಖಾನ್​, ಫರ್ಹಾನ್​ ಅಖ್ತರ್​ ಸೇರಿ ಕೆಲವೇ ಕೆಲವು ಮಂದಿ ವಿವಾಹಕ್ಕೆ ಹಾಜರಾಗಿದ್ದಾರೆ. ಇನ್ನು, ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ