ಜನಾರ್ದನ ರೆಡ್ಡಿಯಿಂದ ಔತಣಕೂಟ; ವಕೀಲರೊಂದಿಗೆ ಸುದೀರ್ಘ‌ ಚರ್ಚೆ 

ಬೆಂಗಳೂರುಆ್ಯಂಬಿಡೆಂಟ್‌ ಕಂಪೆನಿಯ ವಂಚನೆ ಆರೋಪ ಪ್ರಕರಣದಲ್ಲಿ ಜಾಮೀನಿನ ಮೇಲೆ ಬುಧವಾರ ಜೈಲಿನಿಂದ ಬಿಡುಗಡೆಯಾದ ಮಾಜಿ ಸಚಿವ ಗಣಿ ಧಣಿ ಜನಾರ್ದನ ರೆಡ್ಡಿ ಅವರು ಗುರುವಾರ ತಮ್ಮ ಬೆಂಬಲಿಗರಿಗೆ  ಔತಣಕೂಟ ಏರ್ಪಡಿಸಿ ಸಂಭ್ರಮಾಚರಣೆಯಲ್ಲಿದ್ದಾರೆ.

ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಬಳ್ಳಾರಿ ಮತ್ತು ಕಲಬುರಗಿಯಿಂದ ಆಗಮಿಸಿರುವ ನೂರಾರು ಮಂದಿ ಅಭಿಮಾನಿಗಳಿಗೆ ಭರ್ಜರಿ ಔತಣಕೂಟ ಏರ್ಪಡಿಸಿದ್ದಾರೆ.
ಕಾನೂನು ಹೋರಾಟಕ್ಕೆ ಸಿದ್ದವಾಗಿರುವ ಜನಾರ್ದನ ರೆಡ್ಡಿ ಅವರು ವಕೀಲರೊಂದಿಗೆ ಸುದೀರ್ಘ‌ ಚರ್ಚೆ ನಡೆಸಿದ್ದಾರೆ. ಬಳಿಕ ಒಂದೇ ಕಾರಿನಲ್ಲಿ ಬಿಜೆಪಿ ಶಾಸಕ ಶ್ರೀರಾಮುಲು ಅವರೊಂದಿಗೆ ರೆಡ್ಡಿ  ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ