ಕುವೆಂಪು ಕನ್ನಡಕ್ಕಷ್ಟೇ ಅಲ್ಲ, 20 ನೇ ಶತಮಾನ ಜಗತ್ತಿಗೆ ನೀಡಿದ ಅತ್ಯಂತ ಶ್ರೇಷ್ಠ ಕವಿ: ಪೆÇ್ರ.ಎಸ್.ಜಿ.ಸಿದ್ಧರಾಮಯ್ಯ

ಬೆಂಗಳೂರು, ನ.12- ಕನ್ನಡದ ರಸ ಋಷಿ ಕುವೆಂಪು ಕನ್ನಡಕ್ಕಷ್ಟೇ ಅಲ್ಲ, 20 ನೇ ಶತಮಾನ ಜಗತ್ತಿಗೆ ನೀಡಿದ ಅತ್ಯಂತ ಶ್ರೇಷ್ಠ ಕವಿಗಳಲ್ಲೊಬ್ಬರು. ಅವರ ಹುಟ್ಟೂರಿನಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳು ಅಭಿನಂದನೆಯನ್ನು ಸ್ವೀಕರಿಸುತ್ತಿರುವುದು ಸುಕೃತ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪೆÇ್ರ.ಎಸ್.ಜಿ.ಸಿದ್ಧರಾಮಯ್ಯ ಹೇಳಿದರು.

ನೆರೆ ರಾಜ್ಯಗಳಾದ ತಮಿಳುನಾಡು, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಕೇರಳ ರಾಜ್ಯಗಳ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸುವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಾಸಕ ಅರಗ e್ಞÁನೇಂದ್ರ ಅಧ್ಯಕ್ಷತೆ ವಹಿಸಿ ಪ್ರಾಧಿಕಾರದ ಈ ಭಾಷಾ ಪರವಾದ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್, ಪ್ರಾಧಿಕಾರದ ಸದಸ್ಯರಾದ ಪ್ರಭಾಕರ್ ಪಟೇಲ್, ಪ್ರಕಾಶ್ ಜೈನ್, ಮಹಂತೇಶ ಲಕ್ಷ್ಮಣ ಹಟ್ಟಿ, ಗಿರೀಶ್ ಪಟೇಲ್ ಉಪಸ್ಥಿತರಿದ್ದರು.
ಒಟ್ಟು 95 ವಿದ್ಯಾರ್ಥಿಗಳಿಗೆ ತಲಾ 25.000 ರೂ.ಗಳ ವಿದ್ಯಾರ್ಥಿ ವೇತನವನ್ನು ಇದೇ ವೇಳೆ ವಿತರಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ