ಪೈಲಟ್ ಎಡವಟ್ಟಿನಿಂದ ವಿಮಾನ ಹೈಜಾಕ್ ಆಗುವ ಭೀತಿ: ಏರಿಯಾನಾ ಅಫ್ಘಾನ್ ಏರ್‌ಲೈನ್‌ನಲ್ಲಿ ಕೆಲ ಕಾಲ ಸೃಷ್ಟಿಯಾದ ಆತಂಕ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಂದಹಾರ್ ಗೆ ತೆರಳುತ್ತಿದ್ದ ವಿಮಾನ ಅಪಹರಣ ಮಾಡುವುದಾಗಿ ಬೆದರಿಕೆಗಳು ಕೇಳಿಬಂದ ಹಿನ್ನಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ನಡೆದಿದೆ.

ಏರಿಯಾನಾ ಅಫ್ಘಾನ್ ಏರ್‌ಲೈನ್‌ ವಿಮಾನದೊಳಗೆ ಪೈಲಟ್‌ ಅಚಾತುರ್ಯದಿಂದ ಹೈಜಾಕ್ ಗುಂಡಿ ಒತ್ತಿದ್ದೇ ಈ ಆತಂಕಕ್ಕೆ ಕಾರಣ ಎನ್ನಲಾಗಿದೆ. ತಕ್ಷಣವೇ ಭದ್ರತಾ ಸಿಬ್ಬಂದಿ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಒಯ್ದು ತಪಾಸಣೆ ನಡೆಸಿದರು. ಬಳಿಕ ಸತ್ಯಾಂಶ ಬಯಲಾಗಿದೆ.

ಅಂತಿಮವಾಗಿ ವಿಮಾನ ಮಧ್ಯಾಹ್ನ 3:30ಕ್ಕೆ ಪ್ರಯಾಣ ಬೆಳೆಸಿತು ಎಂದು ಭದ್ರತಾ ಮೂಲಗಳು ತಿಳಿಸಿವೆ. ಅಲಾರಂ ಮೊಳಗಿದ ತಕ್ಷಣ ಏರ್‌ಪೋರ್ಟ್‌ ಭದ್ರತಾ ಸಿಬ್ಬಂದಿ ಹಾಗೂ ಎನ್ ಎಸ್ ಜಿ ಕಮಾಂಡೊಗಳು ವಿಮಾನವನ್ನು ಸುತ್ತುವರಿದು ವಶಕ್ಕೆ ತೆಗೆದುಕೊಂಡರು. ಪೈಲಟ್‌ನ ಅಚಾತುರ್ಯದಿಂದ ಈ ಪ್ರಮಾದವಾಗಿದೆ. ಪೈಲಟ್‌ ಈ ಬಗ್ಗೆ ಲಿಖಿತವಾಗಿ ಒಪ್ಪಿಕೊಂಡ ಬಳಿಕ ವಿಮಾನದ ಪ್ರಯಾಣಕ್ಕೆ ಅನುಮತಿ ನೀಡಲಾಯಿತು ಎಂದು ಅವರು ಹೇಳಿದ್ದಾರೆ.

hijack scare, after pilot presses wrong button, kandahar flight

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ