ಕೆಜಿಎಫ್ ಟ್ರೈಲರ್ ವೀಕ್ಷಿಸಿದ ರಾಮ್ ಗೋಪಾಲ್ ವರ್ಮಾ: ಉತ್ತರದ ಚಿತ್ರಗಳನ್ನು ಮೀರಿಸುತ್ತಿವೆ ದಕ್ಷಿಣದ ಸಿನಿಮಾ ಎಂದು ಶ್ಲಾಘನೆ

ಮುಂಬೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೇಲರ್ ನೋಡಿದ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಕೆಜಿಎಫ್ ಟ್ರೈಲರ್ ನೋಡಿ ಚಿತ್ರತಂಡದ ಶ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ನಿರ್ದೇಶಕ ರಾಮಗೋಪಾಲ ವರ್ಮಾ ಟ್ವೀಟ್ ಮಾಡಿದ್ದು, ಕೆಜಿಎಫ್ ನೋಡಲೇಬೇಕಾದ ಸಿನಿಮಾ. ಚಿತ್ರದ ಟ್ರೈಲರ್ ಅಮೇಜಿಂಗ್ ಆಗಿದ್ದು, ರೋಮಾಂಚನವನ್ನ ಹೆಚ್ಚಿಸುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳು ಉತ್ತರ ಭಾರತದ ಸಿನಿಮಾಗಳಿಗಿಂತ ಹೆಚ್ಚು ಎತ್ತರಕ್ಕೆ ಏರುತ್ತಿವೆ ಎಂದು ಟ್ವೀಟ್ ಮಾಡಿದ್ದಾರೆ.

ಇನು ಕೆಜಿ ಎಫ್ ಟ್ರೇಲರ್ ಗೆ ಚಿತ್ರರಂಗದ ಹಲವು ಘಟಾನುಘಟುಗಳು ಫಿದಾ ಆಗಿದ್ದು, ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

KGF Trailer,Sandalwood, Ram Gopal Varma,Yash

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ