ಚಾಮರಾಜನಗರದಲ್ಲಿ ಟಿಪ್ಪು ಜಯಂತಿಗೆ ಚಾಲನೆ

ಚಾಮರಾಜನಗರ: ಇಂದು ಪ್ರಪ್ರಥಮ ಬಾರಿಗೆ ಚಾಮರಾಜ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಈಶ್ವರ ಖಂಡ್ರೆಯವರು ಆಗಮಿಸಿ ಪಕ್ಷದ ಕಛೇರಿಯಲ್ಲಿ ಟಿಪ್ಪು ಜಯಂತಿಗೆ ಚಾಲನೆ ನೀಡಿದರು.

ಈ ಮೂಲಕ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಜಿಲ್ಲಾ ಪಧಾದಿಕಾರಿಗಳ ಸಭೆಯನ್ನು ಉದ್ದೇಶಿಸಿ ಪಕ್ಷ ಸಂಘಟನೆ, ಶಕ್ತಿ ಕಾರ್ಯಕ್ರಮ, ಜನ ಸಂಪರ್ಕ ಅಭಿಯಾನ, ಮುಂಬರಲಿರುವ ಲೋಕಸಭಾ ಚುನಾವಣೆಯ ಬಗ್ಗೆ ಒತ್ತು ನೀಡಲು ಕರೆ ನೀಡಲಾಯಿತು ಹಾಗೂ ಮೋದಿ ನೇತ್ರತ್ವದ ಕೇಂದ್ರ ಸರ್ಕಾರದ ವ್ಯಫಲ್ಯಗಳ ಬಗ್ಗೆ ವಿವರಿಸಲಾಯಿತು.

ಸಭೆಗಳಿಗೆ ಹಾಜರಾಗದವರ ವಿರುದ್ದ ಕ್ರಮ ಜರುಗಿಸಲು ಸೂಚಿಸಲಾಯಿತು.

ಈ ಸಭೆಯಲ್ಲಿ ಸಂಸದರಾದ ಶ್ರೀ ಧ್ರವನಾರಾಯಣ, ಸಚಿವರಾದ ಶ್ರೀ ಪುಟ್ಟರಂಗಶೆಟ್ಟಿ, ಜಿಲ್ಲಾ/ ಬ್ಲಾಕ್‌ ಅಧ್ಯಕ್ಷರು, ಹಾಗೂ ಹಿರಿಯ ಮುಖಂಡರು ಭಾಗವಹಿಸಿದ್ದರು.

tippu jayanti,eshwar khandre,chamarajanagar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ