ಅಪನಗದೀಕರಣ, ಜಿಎಸ್ಟಿ ಕಾರಣದಿಂದಲೇ ಭಾರತದ ಆರ್ಥಿಕತೆ ಕುಸಿದಿದೆ: ರಘುರಾಮ್ ರಾಜನ್

ವಾಷಿಂಗ್ಟನ್: ಕಳೆದ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಕುಸಿಯಲು ಸರ್ಕಾರ ಜಾರಿಗೊಳಿಸಿದ ಅಪನಗದೀಕರಣ ಹಾಗೂ ಸರಕು  ಮತ್ತು ಸೇವಾ ತೆರಿಗೆಯೇ ಕಾರಣ ಆಗಿದೆ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ಶುಕ್ರವಾರ ಬರ್ಕ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ  ಸಭಿಕರನ್ನುದ್ದೇಶಿಸಿ ಮಾತನಾಡಿದ ರಾಜನ್ ಪ್ರಸಕ್ತ 7 ಶೇಕಡ ಬೆಳವಣಿಗೆಯ ದರ ದೇಶದ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ ಎಂದರು .2012ರಿಂದ 2016ರವರೆಗೆ ಭಾರತ ಅತ್ಯಂತ ವೇಗವಾಗಿ ಆರ್ಥಿಕ ಪ್ರಗತಿಯನ್ನು ದಾಖಲಿಸಿತ್ತು. ಇದು ನೋಟ್ ಬ್ಯಾನ್ ಹಾಗೂ ಜಿಎಸ್ಟಿ ಜಾರಿಯಾದ ಬಳಿಕ ಕುಂಠಿತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

“ಅಪನಗದೀಕರಣ ಮತ್ತು ಜಿಎಸ್ಟಿ ಎನ್ನುವ ಎರಡು ಬಹುದೊಡ್ಡ ಆಘಾತಗಳು  ಭಾರತದ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಜಾಗತಿಕ ಆರ್ಥಿಕತೆಯ ಬೆಳವಣಿಗೆ ಏರಿಕೆಯಾದಗಲೂ ಸಹ ಭಾರತದ ಬೆಳವಣಿಗೆ ಕುಸಿತ ದಾಖಲಿಸಿದೆ.”
25 ವರ್ಷಗಳಿಂದ ಏಳು ಶೇಕಡಾ ಏರಿಕೆಯಾಗುತ್ತಿರುವುದು ಭಾರತದ ಮಟ್ಟಿಗೆ ಅತ್ಯಂತ ಉತ್ತಮ ಬೆಳವಣಿಗೆ ಆದರೂ ಆದರೆ ಕೆಲವು ಅರ್ಹಗಳಲ್ಲಿದು ಕಳೆದ ಕೆಲ ವರ್ಷಗಳಿಂದ ೩.೫ ಶೇಕಡಾ ಆಗಿದ್ದ ಹಿಂದೂ ಬೆಳವಣಿಗೆಯನ್ನು ಹೋಲುತ್ತದೆ.
“ಉದ್ಯೋಗ ಮಾರುಕಟ್ಟೆಗೆ ಆಗಮಿಸುತ್ತಿರುವ ಝ್ಜನರಿಗೆ ಹೋಲಿಸಿದಾಗ ಈ ಬೆಳವಣಿಗೆ ಸಾಕಾಗಲಾರದು./ ಅವರಿಗೆ ನಾವು ಉದ್ಯೋಗವನ್ನು ನೀಡಬೇಕಾಗುತ್ತದೆ. ಹಾಗಾಗಿ ನಮಗೆ ಹೆಚ್ಚಿನ ಮಟ್ಟದ ಬೆಳವಣಿಗೆ ಅಗತ್ಯವಿದೆ.ಹಾಗಾಗಿ ಈ ಮಟ್ಟದಲ್ಲಿ ತೃಪ್ತಿ ಕಾಣಲು ಸಾಧ್ಯವಿಲ್ಲ.ಭಾರತವು ಜಾಗತಿಕ ಬೆಳವಣಿಗೆಗೆಸೂಕ್ಷ್ಮವಾಗಿ ಸ್ಪಂದಿಸುತ್ತಿದೆ.ಭಾರತವು ಹೆಚ್ಚು ತೆರೆದ ಆರ್ಥಿಕತೆಯಾಗಿದೆ, ಮತ್ತು ವಿಶ್ವದ ಆರ್ಥಿಕತೆಯೊಡನೆ ಅದು ಹೆಚ್ಚು ಬೆಳವಣಿಗೆ ಸಾಧಿಸುತ್ತಿದೆ.
“2017ರಲ್ಲಿ ವಿಶ್ವದ ಆರ್ಥಿಕತೆ ಏರುಗತಿಯತ್ತ ಸಾಗಿದರೂ ಭಾರತ ಕುಸಿತ ದಾಖಲಿಸಿದೆ. ಇದಕ್ಕೆ ಕಾರಣವಾಗಿದ್ದೇ ಆ ಎರಡು ಹೊಡೆತಗಳು (ನೋಟ್ ಬ್ಯಾನ್ ಹಾಗೂ ಜಿಎಸ್ಟಿ)ಅವು ನಿಜಕ್ಕೂ ಕಠಿಣ ಹಾಗೂ ಬಲವಾದ ಹೊಡೆತವಾಗಿದ್ದವು.ಇದನ್ನು ತಾಳಲಾರದೆ ಭಾರತದ ಆರ್ಥಿಕತೆ ಕುಸಿದಿತ್ತು.” ಅವರು ಹೇಳಿದರು
ಈ ವರ್ಷ ಭಾರತ ಮತ್ತೆ ಬೆಳವಣಿಗೆ ಸಾಧಿಸುತ್ತಿದೆಯಾದರೂ ತೈಲ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ತೈಲದ ವಿಷಯದಲ್ಲಿ ಭಾರತ ಇನ್ನೂ ಪರದೇಶಗಳಿಗೆ ಅವಲಂಬಿತವಾಗಿದೆ. ತೈಲ ಬೆಲೆ ಏರಿಕೆಯ ಕಾರಣ ಅಪನಗದೀಕರಣ, ಜಿಎಸ್ಟಿ ಪರಿಣಾಮದಿಂದ ದೇಶ ಚೇತರಿಸಿಕೊಳ್ಳುತ್ತಿದ್ದರೂ ಸಹ ಭಾರತೀಯ ಆರ್ಥಿಕತೆಗೆ ಅಗತ್ಯ ಪ್ರಮಾಣದ ಬೆಳವಣಿಗೆ ಸಾಧಿಸುವುದು ಕಠಿಣವಾಗಲಿದೆ.” ರಾಜನ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ