ಛತ್ತೀಸ್‍ಗಢವನ್ನು ನಕ್ಸಲರಿಂದ ಬಹುತೇಕ ಮುಕ್ತಗೊಳಿಸಿದ ಸಿಎಂ ರಮಣ್‍ಸಿಂಗ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶ್ಲಾಘನೆ

ರಾಯ್‍ಪುರ್, ನ.10- ಮುಖ್ಯಮಂತ್ರಿ ರಮಣ್‍ಸಿಂಗ್ ಛತ್ತೀಸ್‍ಗಢ ರಾಜ್ಯವನ್ನು ನಕ್ಸಲರಿಂದ ಬಹುತೇಕ ಮುಕ್ತಗೊಳಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶ್ಲಾಘಿಸಿದ್ದಾರೆ.

ನಕ್ಸಲ್‍ವಾದ ಕ್ರಾಂತಿಯ ಮಾಧ್ಯಮವೂ ಅಲ್ಲ. ಅದರಿಂದ ಯಾವ ರಾಜ್ಯಗಳಿಗೂ ಪ್ರಯೋಜನವೂ ಇಲ್ಲ. ಇಂಥ ನಕ್ಸಲ್ ಚಟುವಟಿಕೆಗಳನ್ನು ಛತ್ತೀಸ್‍ಗಢದಿಂದ ಬಹುತೇಕ ನಿರ್ಮೂಲನೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಯ್‍ಪುರ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಛತ್ತೀಸ್‍ಗಢ ಈ ಹಿಂದೆ ಆರ್ಥಿಕವಾಗಿ ಹಿಂದುಳಿದ ರಾಜ್ಯವಾಗಿತ್ತು. ಈಗ ಇದು ಇಂಧನ ಮತ್ತು ಸಿಮೆಂಟ್ ಉತ್ಪಾದನೆಯ ಬಹುದೊಡ್ಡ ಕೇಂದ್ರವಾಗಿದೆ ಎಂದು ಬಣ್ಣಿಸಿದರು.

ಬಿಜೆಪಿ ಆಡಳಿತದಲ್ಲಿ ಛತ್ತೀಸ್‍ಗಢ ಈಗ ಕಲ್ಯಾಣ ಕಾರ್ಯಕ್ರಮಗಳ ರಾಜ್ಯವಾಗಿದೆ. ಈ ರಾಜ್ಯ ಭ್ರಷಾಚಾರದಿಂದ ಮುಕ್ತವಾಗಿದ್ದು, ಹಲವಾರು ಅಭಿವೃದ್ಧಿ ಯೋಜನೆಗಳು ಜಾರಿಗೆ ಬಂದಿವೆ ಎಂದು ಅಮಿತ್ ಶಾ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ