ಮಿತಿ ಮೀರಿದ ಸಿಲಿಕಾನ್ ಸಿಟಿ ಮಾಲಿನ್ಯ ಪ್ರಮಾಣ

ಬೆಂಗಳೂರು, ನ.9- ಸುಪ್ರೀಂಕೋರ್ಟ್ ಪಟಾಕಿ ಸಿಡಿಸಲು ಕೇವಲ ಎರಡು ಗಂಟೆಗಳಷ್ಟೆ ಸಮಯ ನಿಗದಿ ಮಾಡಿದ್ದರೂ ಆ ಅವಧಿಯಲ್ಲಿ ಸಿಡಿಸಿದ ಪಟಾಕಿಗಳು ಭಾರೀ ಮಾಲಿನ್ಯವನ್ನು ಉಂಟು ಮಾಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯದ ಪ್ರಮಾಣ ಮಿತಿ ಮೀರಿದೆ. ಇದು ಸಿಲಿಕಾನ್ ಸಿಟಿಗೂ ಕೂಡ ಆವರಿಸಿದೆ. ರಾತ್ರಿ 8ರಿಂದ 10 ಗಂಟೆಯವರೆಗೆ ಪಟಾಕಿ ಸಿಡಿಸಲು ಸುಪ್ರೀಂಕೋರ್ಟ್ ಅವಕಾಶ ನೀಡಿತ್ತು. ಈ ಅವಧಿಯಲ್ಲಿ ಸಿಡಿಸಿದ ಪಟಾಕಿಯಿಂದ ವಾಯುಮಾಲ್ಯ ವಿಪರೀತವಾಗಿದ್ದು, ಉತ್ತಮ ಗಾಳಿ ಸಿಗದ ವಾತಾವರಣ ನಿರ್ಮಾಣವಾಗಿದೆ.

ದೀಪಾವಳಿ ಹಬ್ಬದ ಅಂಗವಾಗಿ ಪಟಾಕಿ ಸಿಡಿತದಿಂದಾಗಿ ಬೆಂಗಳೂರಿನಲ್ಲಿ ಮಾಮೂಲಿ ದಿನಕ್ಕಿಂತ ವಾಯುಮಾಲಿನ್ಯ ಹೆಚ್ಚಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ 6 ಮಾಪನ ಕೇಂದ್ರಗಳಲ್ಲಿ ಮಾಲಿನ್ಯ ಸ್ವಲ್ಪ ಹೆಚ್ಚಾಗಿಯೇ ದಾಖಲಾಗಿದೆ.
ನಗರದ ರೈಲ್ವೆ ನಿಲ್ದಾಣದಲ್ಲಿ ಅತಿ ಹೆಚ್ಚು ವಾಯು ಮಾಲಿನ್ಯ ದಾಖಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಇದರ ಪ್ರಮಾಣ ಕಡಿಮೆಯಾಗಿದೆ. ಆದರೂ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳು, ವಿವಿಧ ಮೂಲಗಳಿಂದ ಉಂಟಾಗುತ್ತಿರುವ ವಾಯುಮಾಲಿನ್ಯ ನಗರದ ಜನರ ನೆಮ್ಮದಿಯನ್ನು ಹಾಳು ಮಾಡುತ್ತಿದೆ.

ಈ ಬಾರಿಯ ಪಟಾಕಿ ಹಬ್ಬದಲ್ಲಿ ವಾಯುಮಾಲಿನ್ಯ ಪ್ರಮಾಣ ಎಷ್ಟಿತ್ತು ಎಂಬುದನ್ನು ಗಮನಿಸಿದರೆ ರೈಲ್ವೆ ನಿಲ್ದಾಣದಲ್ಲಿ ಮಾಲಿನ್ಯದ ಪ್ರಮಾಣ ಮಿತಿ ಮೀರಿತ್ತು. 147 ಮೈಕ್ರೋ ಗ್ರಾಂನಷ್ಟು ಮಾಲಿನ್ಯದ ಪ್ರಮಾಣ ದಾಖಲಾಗಿತ್ತು.
ಇನ್ನು ಈ ತಿಂಗಳ ಆರಂಭದಲ್ಲೇ ಅಂದರೆ ದೀಪಾವಳಿ ಹಬ್ಬಕ್ಕೂ ಮುನ್ನ ನಗರದ ವಾತಾವರಣ ಉತ್ತಮವಾಗಿತ್ತು. ದೀಪಾವಳಿಯಲ್ಲಿ ನಾಲ್ಕು ದಿನ ಪಟಾಕಿ ಸಿಡಿಸಿದ್ದರಿಂದಾಗಿ ಬಹುತೇಕ ಏರಿಯಾಗಳಲ್ಲಿ ಉತ್ತಮ ಗಾಳಿ ಸಿಗುತ್ತಿಲ್ಲ.

ಬಾಪೂಜಿ ನಗರದಲ್ಲಿ ಹಬ್ಬಕ್ಕೂ ಮುನ್ನ 88 ಮೈಕ್ರೋ ಗ್ರಾಂನಷ್ಟಿದ್ದರೆ. ಪಟಾಕಿ ಸಿಡಿತದಿಂದಾಗಿ 153 ಮೈಕ್ರೋ ಗ್ರಾಂನಷ್ಟು ವಾಯುಮಾಲಿನ್ಯವಾಗಿದೆ. ಇನ್ನು ಬಿಟಿಎಂಲೇಔಟ್‍ನಲ್ಲಿ ಶೇ.70ರಷ್ಟಿದ್ದರೆ. ಈಗ 160ರಷ್ಟಾಗಿದೆ.

ಜಯನಗರ 5ನೇ ಹಂತದಲ್ಲಿ 94ರಷ್ಟಿದ್ದ ಮಾಯುಮಾಲಿನ್ಯದ ಪ್ರಮಾಣ 172ಕ್ಕೆ ಏರಿಕೆಯಾಗಿದೆ. ಪೀಣ್ಯ ಸಿಟಿ ರೈಲ್ವೆ ನಿಲ್ದಾಣದಲ್ಲಿ 146, ವಿಲ್ಸನ್‍ಗಾರ್ಡ್‍ನಲ್ಲಿ 145, ಹೆಬ್ಬಾಳಲ್ಲಿ 144 ಮೈಕ್ರೋ ಗ್ರಾಂನಷ್ಟು ವಾಯುಮಾನ್ಯವಾಗಿದೆ.

100 ಹಾಗೂ ಅದಕ್ಕಿಂತ ಕಡಿಮೆ ಮೈಕ್ರೋ ಗ್ರಾಂನಷ್ಟು ವಾಯುಮಾಲಿನ್ಯ ದಾಖಲಾದರೆ ಉತ್ತಮ ವಾತಾವರಣ. ಅದನ್ನು ದಾಟಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಬಾರಿ ಬಿಟಿಎಂ ಮತ್ತು ಜಯನಗರದಲ್ಲಿ ಪಟಾಕಿಯಿಂದ ವಾಯುಮಾಲಿನ್ಯ ಉಂಟಾಗಿರುವುದು ಆತಂಕಕಾರಿ ವಿಷಯ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ