ಕೆಜಿಎಫ್ ಟ್ರೈಲರ್ ಲಾಂಚ್: ನನ್ನ ತಂದೆ ಅಪ್ಪಟ ಕನ್ನಡಿಗ ಎಂದ ತಮಿಳು ನಟ ವಿಶಾಲ್

ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುಕೋಟಿ ವೆಚ್ಚದ ಕೆಜಿಎಫ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲಾತಣದಲ್ಲಿ ಧೂಳೆಬ್ಬಿಸಿದೆ.

ಇನ್ನು ಚಿತ್ರದ ಟ್ರೈಲರ್ ಲಾಂಚ್ ಗೆ ಬಂದಿದ್ದ ತಮಿಳು ನಟ ವಿಶಾಲ್ ಅವರು ನನ್ನ ತಂದೆ ಅಪ್ಪಟ ಕನ್ನಡಿಗ ಎಂದು ಹೇಳಿ ಅಚ್ಚರಿ ಮೂಡಿಸಿದರು. ನನಗೂ ಸ್ವಲ್ಪ ಸ್ವಲ್ಪ ಕನ್ನಡ ಬರುತ್ತೆ ಎಂದರು.

ವಿಶಾಲ್ ಮಾತನಾಡುತ್ತಿದ್ದಂತೆ ಸಭಿಕರಲ್ಲಿ ಕುಳಿತಿದ್ದ ವಿಶಾಲ್ ತಂದೆ ಜಿಕೆ ರೆಡ್ಡಿ ಎದ್ದು ನಿಂತು ನಾನೇ ಅವನಪ್ಪ ಎಂದು ಅಚ್ಚ ಕನ್ನಡದಲ್ಲಿ ಹೇಳಿ ನೆರೆದಿದ್ದವರನ್ನು ಚಕಿತಗೊಳಿಸಿದರು.
ಬೆಂಗಳೂರಿನಲ್ಲಿ ಕೆಜಿಎಫ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಈ ಸಿನಿಮಾ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ