ಬಾಲಕಿ ಬಾಯಲ್ಲಿ ಪಟಾಕಿ ಇಟ್ಟು ಸಿಡಿಸಿದ ಹುಡುಗ: ಗಂಭೀರವಾಗಿ ಗಾಯಗೊಂಡ ಬಾಲಕಿ ಸ್ಥಿತಿ ಚಿಂತಾಜನಕ

ಲಖನೌ: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ದೇಶಾದ್ಯಂತ ಮನೆ ಮಾಡಿದೆ. ಪಟಾಕಿ, ಸಿಡಿಮದ್ದುಗಳ ಸಂಭ್ರಮವೂ ಹೆಚ್ಚಿದೆ. ದೀಪಾವಳಿ ಸಂಭ್ರಮದ ವೇಳೆ ಪಟಾಕಿ ಸಿಡಿಸುವಾಗ ದುರಂತವಂದು ಸಂಭವಿಸಿರುವ ಘಟನೆ ಮೀರತ್ ನಲ್ಲಿ ನಡೆದಿದೆ.

ಹುಡುಗನೊಬ್ಬ ಮೂರು ವರ್ಷದ ಬಾಲಕಿಯ ಬಾಯಿಯಲ್ಲಿ ಪಟಾಕಿ ಇಟ್ಟು ಸಿಡಿಸಿದ ಪರಿಣಾಮ ಬಾಲಕಿಯು ಗಂಭೀರವಾಗಿ ಗಾಯಗೊಂಡಿದ್ದು, ಸಾವುಬದುಕಿನ ನಡುವೆ ಹೋರಾಟ ನಡೆಸಿತ್ತಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.

ಮೀರತ್ ನ ಮಿಲಾಕ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಘಟನೆ ಬಳಿಕ ಹುಡುಗ ಪರಾರಿಯಾಗಿದ್ದಾನೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಪತ್ತೆಗೆ ಮುಂದಾಗಿದ್ದಾರೆ.

ಬಾಲಕಿಯ ತಂದೆ ಶಶಿ ಕುಮಾರ್‌ ಈ ಕುರಿತು ನೀಡಿರುವ ದೂರಿನಲ್ಲಿ, ಗ್ರಾಮದವನೇ ಆದ ಹರ್ಪಾಲ್ ಎಂಬಾತ ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯ ಬಳಿ ಬಂದು ಕೈಯಲ್ಲಿದ್ದ ಸಿಡಿಮದ್ದನ್ನು ಬಾಲಕಿಯ ಬಾಯಿಗೆ ಇಟ್ಟು ಸಿಡಿಸಿದ್ದಾನೆ. ಇದರಿಂದಾಗಿ ಬಾಲಕಿಯ ಬಾಯಿ ಮತ್ತು ಮುಖಕ್ಕೆ ಗಾಯವಾಗಿದ್ದು, 50 ಹೊಲಿಗೆಗಳನ್ನು ಹಾಕಲಾಗಿದೆ. ಗಂಟಲಿನಲ್ಲೂ ಕೂಡ ಸೋಂಕು ಉಂಟಾಗಿದೆ ಎಂದು ಪೋಷಕರು ದೂರಿದ್ದಾರೆ.

up girl,critical,boy-sets-off-cracker,inside-her-mouth

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ