ನೋಟ್ ಬ್ಯಾನ್ ವರ್ಷಾಚರಣೆ ವೇಳೆಯೇ ಥಗ್ಸ್ ಆಫ್ ಹಿಂದೂಸ್ಥಾನ್ ಬಿಡುಗಡೆ ಕೋ ಇನ್ಸಿಡೆಂಟ್ ಎಂದ ಕಾಂಗ್ರೆಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಜಾರಿಗೆ ತಂದ ನೋಟ್ ಬ್ಯಾನ್, 500, 1000 ರೂ ಮುಖ ಬೆಲೆಯ ನೋಟು ನಿಷೇಧ ಜಾರಿಗೆ ತಂದು ಇಂದಿಗೆ ಎರಡು ವರ್ಷ. ಪ್ರಧಾನಿಯವರ ಈ ಕ್ರಮಕ್ಕೆ ವಿಪಕ್ಷಗಳು ತೀವ್ರ ಆಕ್ರೋಶ ಮುಂದುವರೆಸಿವೆ. ಈ ನಡುವೆ ಕಾಂಗ್ರೆಸ್, ಥಗ್ಸ್ ಆಫ್ ಹಿಂದೂಸ್ಥಾನ್ ಬಿಡುಗಡೆ ಕಾಕತಾಳೀಯ ಎಂದು ಟೀಕಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನ ವಕ್ತಾರ ಮನೀಷ್ ತಿವಾರಿ, ನೋಟು ಅಮಾನ್ಯೀಕರಣದ ವಾರ್ಷಿಕೋತ್ಸವದಂದೇ ಅಮೀರ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಅವರ ಥಗ್ಸ್ ಆಫ್ ಹಿಂದೂಸ್ಥಾನ್ ಸಿನಿಮಾ ಬಿಡುಗಡೆ ಕೇವಲ ಕಾಕತಾಳಿಯ ಅಷ್ಟೇ ಎಂದು ಹೇಳಿದ್ದಾರೆ.

ಇನ್ನು ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಉಂಟಾಗಿದ್ದ 100 ಜೀವಹಾನಿಯ ಬಗ್ಗೆಯೂ ಉಲ್ಲೇಖಿಸಿರುವ ಮನೀಷ್ ತಿವಾರಿ, ನೋಟು ನಿಷೇಧ ವಿಫಲ ಯೋಜನೆಯಾಗಿತ್ತು, ಬ್ಯಾಂಕ್ ನಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ 100 ಕ್ಕೂ ಹೆಚ್ಚು ಜನರು ಜೀವಕಳೆದುಕೊಂಡಿದ್ದರು. ಈ ತುಘಲಕ್ ಆಡಳಿತದಲ್ಲಿ ಹುತಾತ್ಮರಾದವರಿಗೆ 2 ನಿಮಿಷದ ಮೌನಾಚರಣೆ ಮಾಡೋಣ ಎಂದು ಹೇಳಿದ್ದಾರೆ.

Demonetisation, 2nd Anniversary,Thugs of Hindostan,bollywood film,Congress

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ