ಪಿಎನ್ ಬಿ ವಂಚನೆ ಪ್ರಕರಣ: ಮೆಹುಲ್ ಚೋಕ್ಸಿ ಸಂಸ್ಥೆ ಕಾರ್ಯನಿರ್ವಾಹಕನ ಬಂಧನ

ಕೋಲ್ಕತ್ತಾ: ಪಿಎನ್ ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮೆಹುಲ್ ಚೋಕ್ಸಿ ಅವರ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಬಂಧಿಸಿದ್ದಾರೆ.

ದೀಪಕ್ ಕುಲ್ಕರ್ಣಿ ಬಂಧಿತ ವ್ಯಕ್ತಿ. ಹಾಂಗ್ ಕಾಂಗ್ ನಿಂದ ಆಗಮಿಸಿದ್ದ ದೀಪಕ್ ಕುಲಕರ್ಣಿ ಯನ್ನು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ಅಡಿಯಲ್ಲಿ ಕುಲಕರ್ಣಿ ಅವರ ಬಂಧನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕುಲಕರ್ಣಿ ಪ್ರಕರಣದ ಮುಖ್ಯ ಆರೋಪಿಯಾದ ಚೋಕ್ಸಿಯ ಸಾಗರೋತ್ತರ ವ್ಯವಹಾರಗಳ ಜತೆ ಸಂಬಂಧ ಹೊಂದಿದ್ದರು. ಇಡಿ ಅವರ ವಿರುದ್ಧ ಲುಕ್ ಔಟ್ ಸರ್ಕ್ಯುಲರ್ ಹೊರಡಿಸಿತ್ತು ಎಂದು ಅಧಿಕಾರಿಗಳು ಹೇಳಿದರು, ಚೋಕ್ಸಿಗೆ ಸಂಬಂಧಿಸಿರುವ ಹಾಂಗ್ ಕಾಂಗ್ ನಲ್ಲಿದ್ದ “ಡಮ್ಮಿ” ಸಂಸ್ಥೆಯೊಂದರಲ್ಲಿ ಅವರು ನಿರ್ದೇಶಕರಾಗಿದ್ದರು ಎಂದು ತಿಳಿದುಬಂದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ