ಇಂದು ಇಂಡೋ-ವಿಂಡೀಸ್ 2ನೇ ಟಿ20 ಫೈಟ್

ಲಕ್ನೊ: ವಿಂಡೀಸ್ ವಿರುದ್ದ ಮೊದಲ ಟಿ20 ಪಂದ್ಯದಲ್ಲಿ ಪ್ರಯಾಸದಾಯಕ ಗೆಲುವು ಕಂಡ ಟೀಂ ಇಂಡಿಯಾ ಇದೀಗ ಎರಡನೇ ಟಿ20 ಕದನದಲ್ಲಿ ಮತ್ತೆ ಮುಖಾಮುಖಿಯಾಗುತ್ತಿದ್ದು ರೋಹಿತ್ ಪಡೆ ಎರಡನೇ ಪಂದ್ಯವನ್ನ ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು ಪ್ಲಾನ್ ಮಾಡಿದೆ.
ಲಕ್ನೊದಲ್ಲಿ ನಡಯಲಿರುವ ಮತ್ತೊಂದು ಚುಟಕು ಮಹಾ ಸಮರಕ್ಕೆ ಉಭಯ ತಂಡಗಳು ಸಜ್ಜಾಗಿವೆ. ಸರಣಿಯನ್ನ ಜೀವಂತವಾಗಿರಿಸಬೇಕಿದ್ದಲ್ಲಿ ಈ ಪಂದ್ಯವನ್ನ ಗೆಲ್ಲಲ್ಲೇಬೇಕಾದ ಅನಿವಾರ್ಯತೆಯನ್ನ ಬ್ರಾಥ್‍ವೈಟ್ ಪಡೆ ಎದುರಿಸುತ್ತಿದೆ.
ಇಂದಿನ ಪಂದ್ಯದಲ್ಲಿ ರೋಹಿತ್ ಪಡೆಯೇ ಗೆಲುವಿನ ಫೇವರಿಟ್ ತಂಡ ಎನಿಸಿದೆ. ಮೊನ್ನೆ ಪಂದ್ಯದಲ್ಲಿ ಬೌಲರ್‍ಗಳು ಕರಾರುವಕ್ ದಾಳಿ ನಡೆಸಿ ವಿಂಡೀಸ್‍ನ್ನ ಬೇಗನೆ ಕಟ್ಟಿ ಹಾಕಿ ಬ್ಯಾಟ್ಸ್ ಮನ್‍ಗಳಿಗೆ ನೆರವಾದರು. ಆದರೆ ತಂಡದ ಅಗ್ರ ಬ್ಯಾಟ್ಸ್‍ಮನ್‍ಗಳು ಒಬ್ಬರ ಹಿಂದ ಒಬ್ಬರು ಪೆವಿಲಿಯನ್ ದಾರಿ ಹಿಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ