ಬಾಗಿಲು ತೆರೆದ ಶಬರಿಮಲೆ ದೇವಾಲಯ; ವಿಶೇಷ ಪ್ರಾರ್ಥನೆ ಸಲ್ಲಿಸಿದ ಭಕ್ತಾಧಿಗಳು; ನಾಳೆ ಸಂಜೆ ಮತ್ತೆ ಬಂದ್ ಆಗಲಿರುವ ದೇಗುಲದ ಬಾಗಿಲು

ಕಿಚ್ಚಿ: ತಿರುವಂಕೂರು ರಾಜಮನೆತನದ ಕೊನೆಯ ರಾಜ ಚಿತ್ರಾ ತಿರುನಾಲ್ ಬಲರಾಮ ವರ್ಮ ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ಇಂದು ಸಂಜೆ 5 ಗಂಟೆಗೆ ತೆರೆಯಲಾಗಿದ್ದು, ವಿಶೇಷ ಪೂಜಾ ವಿಧಿ-ವಿಧಾನಗಳು ನರವೇರಿದವು.

ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ತೆರೆಯುತ್ತಿದ್ದಂತೆಯೇ ಭಕ್ತಾದಿಗಳು ದೇವಾಲಯಕ್ಕೆ ಬಂದು ಅಯ್ಯಪ್ಪ ಸ್ವಾಮಿ ದರ್ಶನ ಪಡೆದರು. ಆದರೆ ಮಹಿಳಾ ಭಕ್ತರಾರೂ ದೇವಾಲಯಕ್ಕೆ ಆಗಮಿಸದೇ ಇರುವುದು ಗಮನಸೆಳೆಯಿತು. ಭಕ್ತಾಧಿಗಳು ದೇವಾಲಯದ ಪವಿತ್ರ 18 ಮೆಟ್ಟಿಲುಗಳನ್ನು ಏರುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ದೇವಾಲಯದ ಬಾಗಿಲು ನಾಳೆ ಅಥಾಜಾ ​ ಪೂಜೆಯೊಂದಿಗೆ ಸಂಜೆ ಬಂದ್​ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಶಬರಿಮಲೆಗೆ ಆಗಮಿಸುತ್ತಿದ್ದು, ಸಾಗರೋಪಾದಿಯಲ್ಲಿ ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ.

ಇನ್ನು ಮಹಿಳೆಯರಿಗೂ ಶಬರಿಮಲೆ ದೇವಾಲಯದ ಪ್ರವೇಶಕ್ಕೆ ಅವಕಾಶ ನೀಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ಹಿನ್ನಲೆಯಲ್ಲಿ ಮಹಿಳಾ ಭಕ್ತರೂ ದೇವಾಲಯಕ್ಕೆ ಬರುವ ಸಾಧ್ಯತೆಯಿರುವುದರಿಂದ ಪ್ರತಿಭಟನೆ, ಗಲಾಟೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಕೇರಳ ಸರ್ಕಾರ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದೆ.

20 ಸದಸ್ಯರನ್ನೊಳಗೊಂಡ ಕಮಾಂಡೊ ಪಡೆ, 100 ಮಹಿಳೆಯರು ಸೇರಿದಂತೆ ಸುಮಾರು 2 ಸಾವಿರದ 300 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

Sabarimale temple,,Reopens,devotees

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ