ವಿಂಡೀಸ್ ಎದುರು ತಿಣುಕಾಡಿ ಗೆದ್ದ ಟೀಂ ಇಂಡಿಯಾ

ಕೋಲ್ಕತ್ತಾ: ದಿನೇಶ್ ಕಾರ್ತಿಕ್ ಅವರ ಸಮಯೋಚಿತ ಆಟದ ನೆರವಿನಿಂದ ಟೀಂ ಇಂಡಿಯಾ ವೆಸ್ಟ್‍ಇಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಐದು ವಿಕೆಟ್‍ಗಳ ಪ್ರಯಾಸದ ಗೆಲುವು ಪಡೆಯಿತು.
ಈಡನ್ ಗಾರ್ಡನ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ ಓವರ್‍ನಲ್ಲಿ 8 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತು. ಟೀಂ ಇಂಡಿಯಾ 17.5 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತು.
ತಂಡವನ್ನ ಕಾಪಾಡಿದ ದಿನೇಶ್ ಕಾರ್ತಿಕ್ ಅಜೇಯ 31, ಕೃನಾಲ್ ಪಾಂಡ್ಯ ಅಜೇಯ 21, ಮನೀಶ್ ಪಾಂಡೆ 19, ರೋಹಿತ್ ಶರ್ಮಾ 6, ಕೆ,ಎಲ್. ರಾಹುಲ್ 16, ಧವನ್ 3, ರಿಷಭ್ ಪಂತ್ 3 ರನ್ ಗಳಿಸಿದರು.
ಇದಕ್ಕೂ ಮುನ್ನ ವೆಸ್ಟ್‍ಇಂಡೀಸ್ ತಂಡದ ಪರ ಶಾಯಿ ಹೋಪ್ 14, ಶಿಮ್ರಾನ್ ಹೇಟ್ಮರ್ 10, ಡೆರೆನ್ ಬ್ರಾವೊ 5, ಕಿರಾನ್ ಪೊ¯ರ್ಡ್ 14, ಅಲೆನ್ 27 ರನ್ ಗಳಿಸಿದರು. ಭಾರತ ಪರ ಕುಲ್‍ದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದ್ರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ