ಸಾಲ ಪಡೆದವರಿಗಿಂತ ಸಾಲಮನ್ನಾ ಆಗಿದವರ ಸಂಖ್ಯೆ ಹೆಚ್ಚಲು ಹೇಗೆ ಸಾಧ್ಯ? ಕೆಡಿಪಿ‌ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು

ಬೆಂಗಳೂರು: ಬೆಂಗಳೂರು‌ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸಾಲಮನ್ನಾ ಆಗಿರುವ ರೈತ ಮಾಹಿತಿ ನೀಡದ ಅಧಿಕಾರಿಗಳ‌ ವಿರುದ್ಧ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ನಗರದಲ್ಲಿ ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಎಷ್ಟು ರೈತರು ಸಾಲ ಪಡೆದಿದ್ದಾರೆ ಹಾಗೂ ಈವರೆಗೂ ಎಷ್ಟು‌ ಮೊತ್ತದ ಸಾಲ ಮನ್ನಾ ಮನ್ನಾ ಆಗಿದೆ ಎಂಬ ಮಾಹಿತಿ ನೀಡಲು ಸಂಬಂಧ ಪಟ್ಟ ಅಧಿಕಾರಿಗೆ ಕೇಳಿದರು.‌ ಇದಕ್ಕೆ ಉತ್ತರಿಸಿದ ಅಧಿಕಾರಿ, ಅಲ್ಪಾವಧಿಗೆ 3,530 ರೈತರು, ಮಧ್ಯಮ ಅವಧಿಗೆ 8 ಜನ ರೈತರು ಹಾಗೂ ದೀರ್ಘಾವಧಿಗೆ 53 ರೈತರು ಸಾಲ‌ ಪಡೆದಿದ್ದು, 7,531 ರೈತರ ಸಾಲ‌ಮನ್ನಾ ಆಗಿದೆ ಎಂದು ತಪ್ಪು ಮಾಹಿತಿ ನೀಡಿದರು.

ಇದಕ್ಕೆ ಸಿಟ್ಟಿಗೆದ್ದ ಸಚಿವರು, ಸಾಲ ಪಡೆದವರಿಗಿಂತ ಸಾಲಮನ್ನಾ ಆಗಿದವರ ಸಂಖ್ಯೆ ಹೇಗೆ ಹೆಚ್ಚಲು ಸಾಧ್ಯ? ಕೆಡಿಪಿ‌ಸಭೆಗೆ ಈ ರೀತಿ ತಪ್ಪು‌ ಮಾಹಿತಿ ನೀಡಲು ಸಭೆಗೆ ಬರುತ್ತೀರಾ? ಇನ್ನೊಮ್ಮೆ ಈ ರೀತಿ ಮಾಡಿದರೆ ಅಮಾನತು ಮಾಡುತ್ತೇನೆ ಎಂದು ಎಚ್ಚರಿಸಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ‌ ಸಾಲ ಪಡೆದ ರೈತರ ಮಾಹಿತಿ ಕೂಡ ಅಧಿಕಾರಿ ನೀಡಲಿಲ್ಲ.‌ಅದಕ್ಕೆ ಕೋಪಗೊಂಡ ಅವರು, ಏತಕ್ಕಾಗಿ ಸಭೆಗೆ ಬರುತ್ತೀರಾ? ನಿಮ್ಮ ಮುಖ ನೋಡಲು ಕರೆಸುತ್ತೀವಾ? ಬೆಂಗಳೂರಿನಂಥ ನಗರದಲ್ಲಿಯೇ ಸಾಲ ಪಡೆದ ರೈತರ ಅಂಕಿ ಸಂಖ್ಯೆ ಇಲ್ಲವೆಂದರೆ ಬೇರೆ ಜಿಲ್ಲೆಗಳಲ್ಲಿ ಹೇಗೆ ಸಿಗುತ್ತದೆ? ಆದಷ್ಟು ಶೀಘ್ರವೇ ಈ ಮಾಹಿತಿಯನ್ನು ಡಿಸಿಗೆ ನೀಡಬೇಕು,ಮುಂದಿನ ಸಭೆಗೆ ಸಿದ್ದರಾಗಿ ಬರುವಂತೆ ಸೂಚಿಸಿದರು.

ನಾನು‌ನಿತ್ಯ 49 ಸಾವಿರ ಕೋಟಿ ಸಾಲ ಮನ್ನಾ ಮಾಡುತ್ತಿದ್ದೇವೆ ಎಂದು ಹೇಳುತ್ತೇವೆ.‌ಆದರೆ ಅಧಿಕಾರಿಗಳು‌ ಮಾತ್ರ ಇದರ ಗಂಭೀರತೆ ಅರ್ಥವಾಗುತ್ತಿಲ್ಲ ಎಂದು ಗದರಿಸಿದರು.

ಬೆಂಗಳೂರು ದಕ್ಷಿಣದಲ್ಲಿ 885 ಸರಕಾರಿ ಪ್ರೌಢ ಶಾಲೆ ಇದ್ದು, 35 ಶಾಲೆ ಕೊಡಿ ದುರಸ್ಥೆ ಇದೆ. ೨೪ ಮರುನಿರ್ಮಾಣ ಆಗಬೇಕಿದೆ. ಈ ಶಾಲೆಗಳಲ್ಲಿ ಶೌಚಾಲಯ ಸ್ವಚ್ಛತೆ ಇಲ್ಲದ ಬಗ್ಗೆ ಚರ್ಚೆಯಾಯಿತು. ಈ ಶೌಚಾಲಯಗಳ ಸ್ವಚ್ಛತೆಗೆ 2 ಸಾವಿರ ರುಪಾಯಿ ನೀಡಬೇಕು, ಇನ್ನೊಂದು ತಿಂಗಳಲ್ಲಿ ಎಲ್ಲ ಶೌಚಾಲಯ ಸ್ವಚ್ಛಗೊಳಿಸುವಂತೆ ಸೂಚಿಸಿದರು.

ಸರಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾದ ಸಮಯಕ್ಕೆ ಬರಲ್ಲ. ರೋಗಿಗಲಕು ಕೇಳಿದರೆ ಧಮಕಿ ಹಾಕ್ತಾರೆ‌ ಎಂದು ಸ್ಥಾಯಿ ಸಮಿತಿ ಸದಸ್ಯರು ದೂರಿದರು. ಇದಕ್ಕೆ ಸಚಿವರು, ಆರೋಗ್ಯಾಧಿಕಾರಿಗಳು ದಿಢೀರ್ ಭೇಟಿ ನೀಡಿ ವೈದ್ಯರ ಕಾರ್ಯವೈಖರಿ ಪರಿಶೀಲಿಸಿ, ಸಮಯಕ್ಕೆ ಸರಿಯಾಗಿ ಬಾರದಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.‌

Bangalore,KDP Meeting,DCM G parameshwar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ