ಪ್ರಧಾನಿ ಮೋದಿಗಿಂತ ದೊಡ್ಡ ಅನಕೊಂಡ ದೇಶದಲ್ಲಿ ಯಾರಿದ್ದಾರೆ: ಆಂಧ್ರ ಹಣಕಾಸು ಸಚಿವ ಯನಮಲ ರಾಮಕೃಷ್ಟುಡು ಕಿಡಿ

ಅಮರಾವತಿ: ಸಿಬಿಐ ಮತ್ತು ಆರ್​ಬಿಐನಂಥ ಸಾಂವಿಧಾನಿಕ ಸಂಸ್ಥೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅನಕೊಂಡದ ರೀತಿಯಲ್ಲಿ ನುಂಗಿ ಹಾಕುತ್ತಿದ್ದಾರೆ ಎಂದು ಆಂಧ್ರದ ಹಣಕಾಸು ಸಚಿವ ಯನಮಲ ರಾಮಕೃಷ್ಟುಡು ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ ಮೋದಿ ಅವರಿಗಿಂತಲೂ ದೊಡ್ಡ ಅನಕೊಂಡ ಯಾರಿದ್ದಾರೆ. ಅವರು ಅನಕೊಂಡವಿದ್ದಂತೆ. ಆಂಧ್ರದ ಬಿಜೆಪಿ ಘಟಕ ಈ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.

ತೆಲುಗು ದೇಶಂ ಪಕ್ಷ ಕೇಂದ್ರದ ಸರ್ವಾಧಿಕಾರ, ದುರಾಡಳಿತ ವಿರುದ್ಧ ಮತ್ತು ಘನತೆಗಾಗಿ ಬಿಜೆಪಿ ವಿರುದ್ಧ ಹೋರಾಡಲಿದೆ. ದೇಶ, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನದ ಆಶಯಗಳನ್ನು ರಕ್ಷಣೆ ಮಾಡಲು ಹೋರಾಡಲಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ, ಅಮಿತ್​ ಷಾ ಮತ್ತು ಬಿಜೆಪಿ ನಾಯಕರು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಉಲ್ಲಂಘಿಸುತ್ತಿದ್ದಾರೆ. ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೋರಾಡುವುದು ದೇಶದ ಪ್ರಜೆಗಳಾದ ನಮ್ಮ ಕರ್ತವ್ಯವವಾಗಿದೆ ಎಂದರು.

ಇನ್ನು ರಾಷ್ಟ್ರ ರಾಜಕಾರಣದಲ್ಲಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಟಿಡಿಪಿ ಪ್ರಮುಖ ಪಾತ್ರ ನಿರ್ವಹಿಸುತ್ತಾ ಬಂದಿದೆ. ರಾಷ್ಟ್ರದ ಭದ್ರತೆ ವಿಚಾರಕ್ಕೆ ಬಂದಾಗ ಪಕ್ಷ ಸಮ್ಮನೆ ಕುಳಿತುಕೊಳ್ಳುವುದಿಲ್ಲ ಅದಕ್ಕಾಗಿಯೇ ಒಕ್ಕೂಟವನ್ನು ರಚಿಸಿಕೊಂಡೇವೆ ಎಂದು ಹೇಳಿದ್ದಾರೆ.

PM Modi,anaconda,swallowing CBI, RBI,Andhra Pradesh Finance Minister Yanamala Rama Krishnudu

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ