ರಾಮ ಮಂದಿರ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧ: ಸಚಿವೆ ಉಮಾ ಭಾರತಿ

ಪಾಟ್ನಾ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕೆಂಬುದು ಕನಸಾಗಿದ್ದು ರಾಮಮಂದಿರ ನಿರ್ಮಾಣಕ್ಕೆ ನನ್ನ ಕಡೆಯಿಂದ ಎಲ್ಲಾರೀತಿಯ ಸಹಕಾರ ನೀಡಲು ಸಿದ್ಧವಿರುವುದಾಗಿ ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

ರಾಮ ಜನ್ಮಭೂಮಿ ಅಂದೋಲನದಲ್ಲಿ ನಾನು ಸಕ್ರಿಯವಾಗಿ ಭಾಗವಹಿಸಿದ್ದೇನೆ, ನನ್ನ ಹಾಗೂ ಎಲ್ ಕೆ ಅಡ್ವಾಣಿ ಮೇಲೆ ಅಯೋಧ್ಯೆ ವಿವಾದ ಕುರಿತ ಕೇಸು ವಿಚಾರಣೆ ನಡೆಯುತ್ತಿದ್ದು, ನನಗೆ ಈ ಬಗ್ಗೆ ಹೆಮ್ಮೆಯಿದೆ. ರಾಮ ಮಂದಿರ ನಿರ್ಮಾಣ ನನ್ನ ಕನಸಾಗಿದ್ದು ನನ್ನ ಕಡೆಯಿಂದ ಯಾವುದೇ ರೀತಿಯ ಸಹಕಾರ ನೀಡಲು ಸಿದ್ದನಿದ್ದೇನೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ಬರುವ ಮುನ್ನ ರಾಮಮಂದಿರ ನಿರ್ಮಾಣಕ್ಕೆ ವಿಧೇಯಕ ತರಬೇಕೆಂದು ಒತ್ತಾಯ ಕೇಳಿಬರುತ್ತಿರುವುದರ ನಡುವೆ ನ್ಯಾಯಾಂಗ ವಿಳಂಬದ ಬಗ್ಗೆ ಕಾನೂನು ರಚನೆಯಾಗಬೇಕು ಎಂದು ಕೇಂದ್ರ ಸಚಿವ ಪಿಪಿ ಚೌಧರಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.ರಾಮ ಮಂದಿರ ನಿರ್ಮಾಣವಾಗಲೇಬೇಕು. ಸುಪ್ರೀಂ ಕೋರ್ಟ್ ಮುಂದಿರುವ ಕೇಸು ಶೀಘ್ರವೇ ಇತ್ಯರ್ಥವಾಗಬೇಕು. ಸರ್ಕಾರದ ಬಗ್ಗೆ ನನಗೇನು ಗೊತ್ತಿಲ್ಲ. ನ್ಯಾಯಾಂಗ ತೀರ್ಪು ವಿಳಂಬವಾಗುವುದಾದರೆ ಕಾನೂನು ರಚನೆಯಾಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಪಿ ಪಿ ಚೌಧರಿ ಹೇಳಿದ್ದರು.

Ayodhya,Ram mandir,Uma Bharati

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ