ಮಾಜಿ ಶಾಸಕ ಎಂ ಪಿ ರವೀಂದ್ರ ನಿಧನಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಂತಾಪ

ಬೆಂಗಳೂರು: ಇಂದು ಬೆಳಗ್ಗೆ ನಿಧನರಾದ ಮಾಜಿ‌ ಶಾಸಕ ಎಂ.ಪಿ. ರವೀಂದ್ರ ಅವರ ಪಾರ್ಥೀವ ಶರೀರಕ್ಕೆ ನಮಿಸಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಸಂತಾಪ ಸೂಚಿಸಿದರು.

ಎಂ.ಪಿ. ರವೀಂದ್ರ ಅವರು ನಮ್ಮೆಲ್ಲರಿಗೂ ಆತ್ಮೀಯ ಸ್ನೇಹಿತ, ಸಹೋದರನಾಗಿ ಇದ್ದವರು. ಶಾಸಕನಾಗಿ, ಐದು ಬಾರಿ ಕೆಎಂಎಫ್ ನಿರ್ದೇಶಕನಾಗಿ, ಜಿಲ್ಲಾ ಬ್ಯಾಂಕ್ ಸದಸ್ಯನಾಗಿ ಪ್ರಗತಿಪರ ಕೆಲಸ ಮಾಡಿದ್ದಾರೆ., ಸಾರ್ವಜನಿಕ ಬದುಕಿನಲ್ಲಿ ಒಳ್ಳೆಯ ವ್ಯಕ್ಯಿ ಎಂದೆನಿಸಿಕೊಂಡಿದ್ದವರು. ಅವರ ಅಗಲಿಗೆ ಬಹಳ ನೋವು ತಂದಿದ್ದು, ಅವರ ನೋವು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಕೇಳಿಕೊಳ್ಳುವೆ. ಇರುವ ವರೆಗು ಸಾರ್ವಜನಿಕರ ಜೀವನದಲ್ಲಿ ಒಳ್ಳೆಯ ಕೆಲಸ ಮಾಡಬೇಕು ಎಂಬ ಪಾಠವನ್ನು ಎಲ್ಲರೂ ಕಲಿಯಬೇಕು. ರವೀಂದ್ರ ಅವರು ಹಾಗೇ ಬದುಕಿದವರು‌ ಎಂದು ಸ್ಮರಿಸಿದರು.

Former MLA,MP Ravindra,Passes Away,Dcm,parameshwar,Condolences

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ