ಪ್ರತ್ಯೇಕ ಉತ್ತರ ಕನಾ೵ಟಕ ರಚನೆ ಹೇಳಿಕೆ ನೀಡಿದ್ದ ಶ್ರೀ ರಾಮುಲುಗೆ ಪೊಲೀಸರಿಂದ ಕ್ಲೀನ್ ಚಿಟ್:

ಬೆಂಗಳೂರು, ಅ.31- ತೆಲಂಗಾಣ ಮಾದರಿ ಪ್ರತ್ಯೇಕ ಉತ್ತರ ಕರ್ನಾಟಕ ರಚನೆ ಮಾಡಲು ದೊಡ್ಡ ಹೋರಾಟ ಹಮ್ಮಿಕೊಳ್ಳಬೇಕು ಎಂಬ ಹೇಳಿಕೆ ನೀಡಿದ್ದ ಆರೋಪದಿಂದ ಶಾಸಕ ಬಿ.ಶ್ರೀರಾಮುಲು ಅವರಿಗೆ ಪೆÇಲೀಸರು ಕ್ಲೀನ್‍ಚಿಟ್ ನೀಡಿದೆ.

ಶ್ರೀರಾಮುಲು ವಿರುದ್ಧ ಬೆಂಗಳೂರಿನ ಕನ್ನಡ ಅನುಷ್ಠಾನ ಮಂಡಳಿಯ ಅಧ್ಯಕ್ಷ ಆರ್.ಎ.ಪ್ರಸಾದ್ ಅವರು ಬೆಂಗಳೂರು ಉತ್ತರ ವಿಭಾಗದ ಉಪ ಪೆÇಲೀಸ್ ಆಯುಕ್ತರಿಗೆ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ನಡೆಸುವಂತೆ ಬಳ್ಳಾರಿ ಗ್ರಾಮೀಣ ಉಪ ವಿಭಾಗದ ಪೆÇಲೀಸರಿಗೆ ಸೂಚಿಸಲಾಗಿತ್ತು.ಪೆÇಲೀಸರು ತನಿಖೆ ನಡೆಸಿ ವರದಿ ಸಲ್ಲಿಸಿದ್ದು, ವರದಿಯಲ್ಲಿ ಶ್ರೀರಾಮುಲು ಸಮಾರಂಭದಲ್ಲಿ ಪ್ರಚೋದಿಸುವ ಮಾತುಗಳನ್ನು ಆಡಿಲ್ಲ. ಆದ್ದರಿಂದ ಅರ್ಜಿ ವಿಚಾರಣೆಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಅರ್ಜಿದಾರರಿಗೆ ಹಿಂಬರಹ ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ