ಮಳಿಗೆಗಳ ನಾಮಫಲಕದಲ್ಲಿ ಶೇ. 60ರಷ್ಟು ಭಾಗ ಕನ್ನಡವಿರಬೇಕು

ಬೆಂಗಳೂರು, ಅ.31- ಮಳಿಗೆಗಳ ನಾಮಫಲಕದಲ್ಲಿ ಶೇ.60ರಷ್ಟು ಭಾಗ ಕನ್ನಡವಿರಬೇಕೆಂಬ ಸರ್ಕಾರದ ಆದೇಶವನ್ನು ಉಲ್ಲಂಘಿಸಿರುವ ಆದಿತ್ಯ ಬಿರ್ಲಾ ಐಡಿಯಾ ಸಂಸ್ಥೆಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಾಳೆ ಮುತ್ತಿಗೆ ಹಾಕಲು ನಿರ್ಧರಿಸಿದೆ.

ಕೋರಮಂಗಲ ನಾಲ್ಕನೇ ಬ್ಲಾಕ್‍ನಲ್ಲಿರುವ ಆದಿತ್ಯ ಬಿರ್ಲಾ ಸಂಸ್ಥೆಗೆ ವೇದಿಕೆ ರಾಜ್ಯಾಧ್ಯಕ್ಷ ಸು.ಚಿ.ನೀಲೇಶ್‍ಗೌಡರ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಮುತ್ತಿಗೆ ಹಾಕಲಿದ್ದಾರೆ.

ಮಳಿಗೆಗಳ ನಾಮಫಲಕದಲ್ಲಿ ಕನ್ನಡವಿರಬೇಕೆಂಬ ಆದೇಶವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕಟ್ಟುನಿಟ್ಟಾಗಿ ಜಾರಿಗೆ ತರಲು ಕ್ರಮಕೈಗೊಂಡಿದೆ.
ಆದರೆ ಈ ಕ್ರಮವನ್ನು ವಿರೋಧಿಸುವ ಮೂಲಕ ಆದಿತ್ಯ ಬಿರ್ಲಾ ಐಡಿಯಾ ಎಂಬ ಸಂಸ್ಥೆಯು ಕನ್ನಡಕ್ಕೆ ಹಾಗೂ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ವೇದಿಕೆ ದೂರಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ