1987ರ ಅಲ್ಪಸಂಖ್ಯಾತ ಸಮುದಾಯದ ಹತ್ಯಾಕಾಂಡ ಪ್ರಕರಣ,ದೆಹಲಿ ಹೈಕೋರ್ಟ್ನಿಂದ 16 ಮಾಜಿ ಪೊಲೀಸರಿಗೆ ಜೀವಾವಧಿ ಶಿಕ್ಷೆ

ನವದೆಹಲಿ,ಅ.30- ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ 1987ರಲ್ಲಿ ನಡೆದ ಅಲ್ಪಸಂಖ್ಯಾತ ಸಮುದಾಯದ 42 ಜನರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್ ಇಂದು 16 ಮಾಜಿ ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ವಿಚಾರಣಾ ನ್ಯಾಯಾಲಯ ಈ ಹಿಂದೆ ಈ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಎಸ್.ಮುರುಳೀಧರ್ ಮತ್ತು ವಿನೋದ್ ಗೋಯಲ್ ಅವರನ್ನೊಳಗೊಂಡ ಪೀಠವು ತಳ್ಳಿ ಹಾಕಿದೆ.

ಪ್ರಾಂತೀಯ ಸಶಸ್ತ್ರ ಪೇದೆ ದಳ(ಪಿಎಸಿ)ಕ್ಕೆ ಸೇರಿದ 16 ಮಾಜಿ ಪೊಲೀಸರನ್ನು ದೋಷಿಗಳೆಂದು ಪರಿಗಣಿಸಿರುವ ಹೈಕೋರ್ಟ್ ಕೊಲೆ, ಅಪಹರಣ, ಕ್ರಿಮಿನಲ್ ಪಿತೂರಿ, ಸಾಕ್ಷಾಧಾರ ನಾಶ ಆರೋಪಗಳ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ