ಮಹಿಳೆಯರಿಗೆ ಕಾಡುತ್ತಿರುವ ಸ್ತನ ಕ್ಯಾನ್ಸರ್ ಕುರಿತು ವಿಮಾ ಸಂಸ್ಥೆಯಿಂದ ಜಾಗೃತಿ

ಬೆಂಗಳೂರು, ಅ.31- ಭಾರತದ ವಿಮಾ ಸಂಸ್ಥೆಯಾದ ಫ್ಯೂಚರ್ ಜನರಲ್ ಇಂಡಿಯಾ ಲೈಫ್ ಇನ್ಸೂರೆನ್ಸ್ ಕಂಪನಿ ಪ್ರೈ. ಲಿಮಿಟೆಡ್ ಸಹಯೋಗದಲ್ಲಿ ಮಾಮ್ಸ್ ಪ್ರೆಸ್ಸೊ ಸಂಸ್ಥೆಯು, ಭಾರತದ ಮಹಿಳೆಯರಿಗೆ ಸಾಮಾನ್ಯವಾಗಿ ಕಾಡುತ್ತಿರುವ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ರಾಷ್ಟ್ರೀಯ ಮಟ್ಟದ ಸಮೀಕ್ಷೆ ಹಮ್ಮಿಕೊಂಡಿತ್ತು.

ಏಕೆಂದರೆ ಭಾರತ ಪ್ರತಿ ನಾಲ್ವರು ಮಹಿಳೆಯರವ ಪೈಕಿ ಒಬ್ಬರು ಸ್ತನ ಕ್ಯಾನ್ಸರ್ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.ಹೀಗಾಗಿ ಎರಡೂ ಸಂಸ್ಥೆಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ಭಾರತ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿವೆ. ಸ್ತನ ಕ್ಯಾನ್ಸರ್ ಸಮಸ್ಯೆ ಭಾರತದಲ್ಲಿ ಹೆಚ್ಚಾಗಿಯೇ ಇದೆ.

ಹೀಗಾಗಿ ಮಾಮ್ಸ್ ಪ್ರೆಸ್ಸೊ ಸಂಸ್ಥೆ ನಡೆಸಿದ ಟೈಯರ್-1 ನಗರಗಳ ಪೈಕಿ ಮುಖ್ಯವಾಗಿ ಬೆಂಗಳೂರಿನ ಮಹಿಳೆಯರಿಗೆ ಈ ಬಗ್ಗೆ ಹೆಚ್ಚಿನ ಜಾಗೃತಿ ಇದೆ. ನಗರದ ಶೇ.87ರಷ್ಟು ಮಹಿಳೆಯರು ಸ್ತನ ಕ್ಯಾನ್ಸರ್ ಸಮಸ್ಯೆ ಬಗ್ಗೆ ಜಾಗೃತರಾಗಿದ್ದಾರೆ.ದೇಶದ ಶೇ.55ರಷ್ಟು ಮಹಳೆಯರು ಸ್ತನ ಕ್ಯಾನ್ಸರ್ ಬಗ್ಗೆ ತಿಳಿದುಕೊಳ್ಳಲು ಆಸಕ್ತರಾಗಿರುವುದಾಗಿ ತಿಳಿಸಿದ್ದಾರೆ.ದುರಂತವೆಂದರೆ ಬೆಂಗಳೂರಿನ ಪ್ರತಿ ಇಬ್ಬರು ಮಹಿಳೆಯರ ಪೈಕಿ ಒಬ್ಬರು ಸ್ತನ ಕ್ಯಾನ್ಸರ್ ಸಮಸ್ಯೆ ಎದುರಿಸುತ್ತಿದ್ದಾರೆ.ಇಷ್ಟೊಂದು ಮಟ್ಟಿಗೆ ಜಾಗೃತರಾಗಿದ್ದರೂ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವವರು ಮಾತ್ರ ತೀರಾ ಕಡಿಮೆ.

ಬೆಂಗಳೂರಿನ ಶೇ 85ರಷ್ಟು ಮಹಿಳೆಯರು ಸ್ತನ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಆಗಾಗ್ಗೆ ಪರೀಕ್ಷೆ ಮಾಡಿಸಿಕೊಳ್ಳಲು ಇಚ್ಛಿಸುತ್ತಾರೆ. ಆದರೆ ಶೇ 30ರಷ್ಟು ಮಹಿಳೆಯರು ಮಾತ್ರ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ.

ಈ ಸಮೀಕ್ಷೆ ಬಗ್ಗೆ ಮಾತನಾಡಿದ ಫ್ಯೂಚರ್ ಜನರಲ್ ಲೈಫ್ ಇನ್ಸೂರೆನ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್‍ನ ಮುಖ್ಯ ಮಾರುಕಟ್ಟೆ ಅಧಿಕಾರಿ ರಾಕೇಶ್ ವಧ್ವಾ, ಅಕ್ಟೋಬರ್ ತಿಂಗಳು ಸ್ತನ ಕ್ಯಾನ್ಸರ್ ಜಾಗೃತಿ ಮೂಡಿಸುವ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಮಾಸವಾಗಿದೆ.ನಾವು ಈ ಮೂಲಕ ನಾಲ್ಕನೇ ಪ್ರಮುಖ ಹಂತದ ಜಾಗೃತಿ ಕಾರ್ಯಕ್ರಮದ ಮೂಲಕ ಭಾರತೀಯ ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ