ಶೃತಿ ಹರಿಹರನ್ ಅಭಿನಯದ ‘ನಾತಿಚರಾಮಿ’ ಬಿಡುಗಡೆಗೂ ಮುನ್ನ ಪ್ರದರ್ಶನ, ಶೃತಿ ನಟನೆಗೆ ಭಾರೀ ಮೆಚ್ಚುಗೆ!

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿ ಕೆಲ ದಿನಗಳಿಂದ ವಿವಾದದಿಂದ ಸುದ್ದಿಯಲ್ಲಿರುವ ನಟಿ ಶೃತಿ ಹರಿಹರನ್ ಈಗ ಹೊಸ ಚಿತ್ರದ ಮೂಲಕ ಸದ್ದು ಮಾಡಿದ್ದಾರೆ.
ಶೃತಿ ಅಭಿನಯದ ನಾತಿಚರಾಮಿ ಚಿತ್ರ ಮುಂಬೈ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್(ಎಂಎಎಂಐ) ಸಂಸ್ಥೆಯು ಏರ್ಪಡಿಸುವ ಮುಂಬೈ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ.
ಹರಿವು ಚಿತ್ರ ಖ್ಯಾತಿಯ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನಸೋರೆ ನಿರ್ದೇಶನದ ನಾತಿಚರಾಮಿ ಚಿತ್ರ ಬಿಡುಗಡೆಗೂ ಮುನ್ನ ಫಿಲಂ ಫೆಸ್ಟಿವಲ್ ನಲ್ಲಿ ಪ್ರದರ್ಶನ ಕಂಡಿತು. ಇನ್ನು ಚಿತ್ರಕ್ಕೆ ಅದ್ಭುತ ವಿಮರ್ಶೆ ಸಿಕ್ಕಿದ್ದು ಶೃತಿ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ನಾತಿಚರಾಮಿ ಚಿತ್ರವು ಮಹಿಳೆಯರ ಒಂಟಿತನ ಮತ್ತು ಲೈಂಗಿಕ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದೆ. ಮೀಟೂ ಅಭಿಯಾನದ ಅಡಿಯಲ್ಲಿ ಸುದ್ದಿಯಲ್ಲಿದ್ದ ಶೃತಿ ಹರಿಹರನ್ ಅವರ ಈ ಸಿನಿಮಾ ಭಾವನಾತ್ಮಕ ಮತ್ತು ಲೈಂಗಿಕ ಬದುಕಿನ ಅಂಶಗಳ ಮೇಲೆ ಬಿಂಬಿತವಾಗಿರುವುದು ವಿಶೇಷ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ