ಬೆಂಗಳೂರು ಎಬಿವಿಪಿ ಘಟಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಭಾಗಿ

ಬೆಂಗಳೂರು,ಅ.30- ಎಬಿವಿಪಿ ಬೆಂಗಳೂರು ಘಟಕ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡು ಮಿಷನ್ ಸಾಹಸಿ ಹೆಸರಿನಡಿ ವಿವಿಧ ಸ್ವ-ರಕ್ಷಣೆಗೆ ಸಂಬಂಧಿಸಿದಂದ ಸಾಹಸಿ ಪ್ರದರ್ಶನಗಳನ್ನು ನೀಡಿ ನೆರೆದಿದ್ದವರ ಮನಸೂರೆಗೊಂಡರು.

ಸತತ 14 ಗಂಟೆಗಳು ನಡೆದ ಈ ಕಾರ್ಯಕ್ರಮದಲ್ಲಿ ಕರಾಟೆ, ಮಾರ್ಷಲ್ ಆಟ್ರ್ಸ್ ಮಾದರಿಯ ಮತ್ತಿತರ ಸ್ವ-ರಕ್ಷಣೆಗೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರು ಸಾಹಸ ಪ್ರದರ್ಶಿಸಿದರು.

ವಿದ್ಯಾರ್ಥಿಗಳು, ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಇದನ್ನು ಧೈರ್ಯವಾಗಿ ಎದುರಿಸಿ ಆತ್ಮರಕ್ಷಣೆ ಮಾಡಿಕೊಳ್ಳುವ ಸಂಬಂಧ ಎಬಿವಿಪಿ ವಿದ್ಯಾರ್ಥಿಗಳಿಗಾಗಿ ಮಿಷನ್ ಸಾಹಸಿ ಹೆಸರಿನಲ್ಲಿ ವಿವಿಧ ತರಬೇತಿಗಳನ್ನು ನೀಡುತ್ತಿದೆ.
ಇದರಲ್ಲಿ ತರಬೇತಿ ಪಡೆದ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಡೆಸಿದ ಸಾಹಸಮಯ ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವುದರ ಜತೆಗೆ ನೆರೆದಿದ್ದ ಜನರಲ್ಲಿ ಉತ್ಸಾಹ ತುಂಬಿದರು.
ಈ ಕಾರ್ಯಕ್ರಮಕ್ಕೆ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಸಹಕಾರ ನೀಡಿದ್ದವು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ