ಪೇಟಿಎಂ ನ ಮೂವರು ಉದ್ಯೋಗಿಗಳ ಬಂಧನ

ನವದೆಹಲಿ: ಪೇಟಿಎಂ ನ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರಿಂದ 20 ಕೋಟಿ ಹಣ ವಂಚಿಸಲು ಯತ್ನಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪೇಟಿಎಂ ನ ಮೂವರು ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಂಸ್ಥೆ ಸಂಗ್ರಹಿಸಿಟ್ಟಿದ್ದ ಖಾಸಗಿ ಮಾಹಿತಿಗಳನ್ನು ಕದ್ದು ಸೋರಿಕೆ ಮಾಡುವುದಾಗಿ ಪೇಟಿಎಂ ನ ಕಾರ್ಯದರ್ಶಿ ಸೇರಿದಂತೆ ಮೂವರು ಉದ್ಯೋಗಿಗಳು ಸಂಸ್ಥೆಯ ಸ್ಥಾಪಕ ವಿಜಯ್ ಶೇಖರ್ ಶರ್ಮಾಗೆ ಬೆದರಿಕೆ ಹಾಕುತ್ತಿದ್ದರು ಎಂದು ನೋಯ್ಡಾ ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯ್ ಶೇಖರ್ ಶರ್ಮಾ ಅವರ ಕಾರ್ಯದರ್ಶಿ ಆಕೆಯ ಪತಿ, ಸಂಸ್ಥೆಯ ಮತ್ತೋರ್ವ ಉದ್ಯೋಗಿ ದೇವೇಂದ್ರ ಕುಮಾರ್ ಹಾಗೂ ಸಂಸ್ಥೆಯ ಕೋಲ್ಕತ್ತಾ ವಿಭಾಗದ ಉದ್ಯೋಗಿಯಾಗಿರುವ ರೋಹಿತ್ ಚೋಮಲ್ ಎಂಬುವವರು ಬೆದರಿಕೆ ಹಾಕುತ್ತಿದ್ದರು ಎಂದು ಹೇಳಿದ್ದಾರೆ.

Paytm, Boss Secretary Arrested,Blackmailing

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ