ಬಜರಂಗ್​ ಬಗಲಿಗೆ ಬೆಳ್ಳಿ… ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಭಾರತೀಯನ ಸಾಧನೆ!

ಬುಡಾಪೆಸ್ಟ್ ​(ಹಂಗೇರಿ): ಭಾರತದ ಬಜರಂಗ್​ ಪೂನಿಯಾ ವಿಶ್ವ ಕುಸ್ತಿ ಚಾಂಪಿಯನ್​ಶಿಪ್​​ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಸಾಧನೆಗೈದ ಎರಡನೇ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜಪಾನಿನ ಟಟುಕೊ ಒಟೊಗುರೊ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ರೆಸ್ಲರ್​ ಬಜರಂಗ್​ ಪೂನಿಯಾ 16-9 ಅಂಕಗಳಿಂದ ಸೋಲುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಉಪಾಂತ್ಯ ತಲುಪಿದ್ದು ಅತ್ಯಂತ ಹೆಮ್ಮೆಯ ವಿಷಯ. ಚಿನ್ನ ಗೆಲ್ಲುವುದೇ ನನ್ನ ಗುರಿಯಾಗಿತ್ತು. ಐದು ವರ್ಷದ ಹಿಂದೆ ಕಂಚು ಗೆದ್ದಿದ್ದೆ. ಆದರೆ ಈ ಬಾರಿ ನನ್ನ ಪ್ರದರ್ಶನವನ್ನು ಉತ್ತಮಗೊಳಿಸಿದ್ದೇನೆ. ಬೆಳ್ಳಿ ಪದಕ ತೃಪ್ತಿ ನೀಡಿದೆ ಎಂದು ಕುಸ್ತಿ ಪಟು ಸಂತಸ ಹಂಚಿಕೊಂಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ