ರಾಜ್‍ಕೋಟ್‍ನಲ್ಲಿ ಇಂಡೋ-ವಿಂಡೀಸ್ ಟೆಸ್ಟ್ ಕಾದಾಟ

ರಾಜ್‍ಕೋಟ್: ಯುವ ಆಟಗಾರರಿಂದ ಕೂಡಿರುವ ಟೀಂ ಇಂಡಿಯಾ ಇಂದಿನಿಂದ ವೆಸ್ಟ್ ಇಂಡೀಸ್ ವಿರುದ್ಧ ರಾಜ್‍ಕೋಟ್‍ನಲ್ಲಿ ಟೆಸ್ಟ್ ಸರಣಿ ಅಡಲಿದೆ.
ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಮತ್ತೆ ಮರಳಿದ್ದು ಯುವ ಅಟಗಾರರೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲಿದ್ದಾರೆ. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಕೊಹ್ಲಿ ತಂಡವನ್ನ ಮುನ್ನಡೆಸುವ ಸವಾಲು ಎದುರಿಸಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಪೂರ್ವಭಾವಿ ತಯಾರಿಯಾಗಿದೆ.
ಕೊಹ್ಲಿಗೆ ತಲೆ ನೋವಾದ ತಂಡದ ಆಯ್ಕೆ
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ತಂಡವನ್ನ ಆಯ್ಕೆ ಮಾಡೋದೆ ದೊಡ್ಡ ತಲೆ ನೋವಾಗಿದೆ.
ಎಲ್ಲ ಆಟಗಾರರಿಗೂ ಅವಕಾಶ ಕೊಟ್ಟು ತಂಡವನ್ನ ಗೆಲ್ಲಿಸೋದು ದೊಡ್ಡ ಸವಾಲಾಗಿದೆ.
ರಾಹುಲ್ ಜೊತೆ ಆರಂಭಿಕರು ಯಾರು ?
ಸದ್ಯ ನಾಯಕ ವಿರಾಟ್ ಕಾಡುತ್ತಿರುವ ಪ್ರಶ್ನೆ ಅಂದ್ರೆ ಆರಂಭಿಕ ಬ್ಯಾಟ್ಸ್ ಮನ್ ರಾಹುಲ್ ಜೊತೆ ಮತ್ತೊರ್ವ ಆರಂಭಿಕನ್ನ ಯಾರನ್ನ ನೇಮಿಸೋದು ಎಂಬುದೇ ದೊಡ್ಡ ಚಿಂತೆಯಾಗಿದೆ. ಆರಂಭಿಕರ ಸ್ಥಾನಕ್ಕೆ ಕನ್ನಡಿದ ಮಯಾಂಕ್ ಅಗರ್‍ವಾಲ್ ಮತ್ತು ಅಂಡರ್ 19 ತಂಡದ ನಾಯಕ ಪೃಥ್ವಿ ಶಾ ನಡುವೆ ಪೈಪೋಟಿ ಇದೆ.
ಇನ್ನು ವೆಸ್ಟ್‍ಇಂಡೀಸ್ ಪರ ವೇಗಿ ಕೆಮರಾನ್ ರೊಚ್ ತಂಡಕ್ಕೆ ಅಲಬ್ಯವಾಗಿದ್ದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ