ಕೋಲ್ಕತ್ತಾದಲ್ಲಿ ‘ನಟಸಾರ್ವಭೌಮ’ ಶೂಟಿಂಗ್ ಮುಕ್ತಾಯ, ಅಲ್ಲೂ ಇದ್ದಾರೆ ಅಪ್ಪು ಫ್ಯಾನ್ಸ್!

ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌವ ಚಿತ್ರದ ಶೂಟಿಂಗ್ ಕೋಲ್ಕತ್ತಾದಲ್ಲಿ ಮುಕ್ತಾಯಗೊಂಡಿದೆ. ಇನ್ನು ಶೂಟಿಂಗ್ ವೇಳೆ ಹಲವು ಅಭಿಮಾನಿಗಳು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿದರು.
ಚಿತ್ರದ ಶೂಟಿಂಗ್ ಕುರಿತಂತೆ ಟ್ವೀಟ್ ಮಾಡಿರುವ ಪವನ್ ಒಡೆಯರ್ ‘ಕೋಲ್ಕತ್ತಾ ಕಾಳಿ ಮಾತಾ ಕೀ ಜೈ, ಕೋಲ್ಕತ್ತಾದಲ್ಲಿ ನಟಸಾರ್ವಭೌಮ ಚಿತ್ರೀಕರಣ ಯಶಸ್ವಿಯಾಗಿದೆ. ಪುನೀತ್ ರಾಜಕುಮಾರ್ ಮತ್ತು ಅನುಪಮ ಆನ್ ಸ್ಕ್ರೀನ್ ಕೆಮಿಸ್ಟ್ರಿ ದೃಶ್ಯಗಳು ಅದ್ಭುತವಾಗಿ ಸೆರೆಯಾಗಿವೆ ಎಂದು ಟ್ವೀಟ್ ಮಾಡಿದ್ದಾರೆ.
ಚಿತ್ರವನ್ನು ರಾಕಲೈನ್ ವೆಂಕಟೇಶ್ ನಿರ್ಮಿಸಿದ್ದು ಚಿತ್ರದಲ್ಲಿ ರಚಿತಾ ರಾಮ್ ಮತ್ತೋರ್ವ ನಾಯಕಿಯಾಗಿ ಅಭಿನಯಿಸಿದ್ದಾರೆ. ಸದ್ಯ ಚಿತ್ರದ ಹಾಡಿನ ಚಿತ್ರೀಕರಣ ಬಾಕಿ ಇದೆ. ಚಿತ್ರಕ್ಕೆ ಡಿ ಇಮಾಮ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಚಿತ್ರೀಕರಣದ ವೇಳೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದು ಪುನೀತ್ ರನ್ನು ಮಾತನಾಡಿಸಲು ತವಕಿಸುತ್ತಿದ್ದರು ಎಂದು ಒಡೆಯರ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ