ಬಾರ್ ಮತ್ತು ರೆಸ್ಟೋರೆಂಟ್‍ಗಳ ಮೇಲೆ ದಾಳಿ: 36 ರೌಡಿಗಳ ವಶ

Varta Mitra News

ಬೆಂಗಳೂರು, ಅ.1- ನಗರದ ಹಲವು ಬಾರ್ ಮತ್ತು ರೆಸ್ಟೋರೆಂಟ್‍ಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೆÇಲೀಸರು, 36 ಸಂಶಯಾಸ್ಪದ ರೌಡಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ರಾಜಾಜಿನಗರ ಪೆÇಲೀಸ್ ಠಾಣಾ ವ್ಯಾಪ್ತಿಯ ನವರಂಗ್ ಬಾರ್, ಮಾಗಡಿ ರಸ್ತೆ ಪೆÇಲೀಸ್ ಠಾಣಾ ವ್ಯಾಪ್ತಿಯ ಕಾಕ್‍ಟೈಲ್ ಬಾರ್ ಮತ್ತು ರೆಸ್ಟೋರೆಂಟ್, ಕಾರ್ತಿಕ್ ಬಾರ್, ಹನುಮಂತನಗರದ ಬ್ಲೂ ವಿಂಗ್ಸ್ ಬಾರ್ ಆಂಡ್ ರೆಸ್ಟೋರೆಂಟ್‍ಗಳಲ್ಲಿ ಸಂಶಯಾಸ್ಪದ ರೌಡಿಗಳು ತಮ್ಮ ಸಂಗಡಿಗರೊಂದಿಗೆ ಇರುವುದರ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೆÇಲೀಸರು, ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ನವರಂಗ್ ಬಾರ್‍ನಲ್ಲಿದ್ದ ಸೂರ್ಯಕುಮಾರ್, ಚಂದ್ರಕಾಂತ್, ಶ್ರೀಕಾಂತ್, ಮದನ್, ಆನಂದ್ ಮತ್ತು ಸಂಜಯ್, ಕಾಕ್‍ಟೈಲ್ ಬಾರ್‍ನಲ್ಲಿದ್ದ ನವೀನ್, ಮಂಜುನಾಥ್, ರಮೇಶ್, ಭರತ್ ಟಿ., ಮಹೇಂದ್ರ ಎಂ., ಮಂಜು, ವಿಜಯಕುಮಾರ್, ಗೋಪಿನಾಯಕ್, ಜಗದೀಶ್, ಜಾಕೀರ್, ಮಹೀಬ್ ಜಾನ್, ಕಾರ್ತಿಕ್ ಬಾರ್‍ನಲ್ಲಿದ್ದ ಶ್ಯಾಮ್ ಸನ್, ಬಾಬು, ಶ್ರೀನಿವಾಸ್, ಮಹೇಶ್, ಶಿವಪ್ರಸಾದ್, ಮಹೇಶ್ ಕುಮಾರ್, ವಿಜಯ್ ಕುಮಾರ್, ಚೇತನ್ ಕುಮಾರ್, ಸಿದ್ದರಾಜು ಮತ್ತು ಹನುಮಂತ ನಗರದ ಬ್ಲೂವಿಂಗ್ಸ್ ಬಾರ್‍ನಲ್ಲಿದ್ದ ಅಶೋಕ್ ಕುಮಾರ್, ಪ್ರದೀಪ್, ವಸಂತ್ ಕುಮಾರ್, ದೇವರಾಜು, ಚೇತನ್ ಕುಮಾರ್, ಕಾಂತರಾಜು, ವಿಜಯ್, ರಾಜಶೇಖರ್ ಮತ್ತು ವಿಜಯ್ ಕುಮಾರ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ