ಎಲ್ಲಾ ಜಾಹಿರಾತು ಫಲಕಗಳು ಅನಧಿಕೃತವೆಂದು ಘೋಷಣೆಗೆ ನಿರ್ಧಾರ

ಬೆಂಗಳೂರು,ಅ.1- ನಗರದಲ್ಲಿರುವ ಎಲ್ಲಾ ಜಾಹಿರಾತು ಫಲಕಗಳನ್ನು ಅನಧಿಕೃತ ಫಲಕಗಳೆಂದು ಘೋಷಣೆ ಮಾಡುವಂತೆ ನ್ಯಾಯಾಲಯದಲ್ಲಿ ಬಿಬಿಎಂಪಿಯಿಂದ ವಾದ ಮಂಡಿಸಲಾಗುವುದು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಸೆ.17ರಂದು ನ್ಯಾಯಾಲಯ ನಗರದಲ್ಲಿರುವ ಎಲ್ಲಾ ಜಾಹಿರಾತು ಫಲಕಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿಲಾಗಿತ್ತು. ಇದರನ್ವಯ ಅಪ್ಲಿಕೇಷನ್ ಆಧಾರಿತ ಸರ್ವೆ ನಡೆಸಲಾಗಿತ್ತು. ಇದರಲ್ಲಿ 3800 ಜಾಹಿರಾತು ಫಲಕಗಳು ಇವೆ ಎಂಬ ಮಾಹಿತಿ ತಿಳಿದುಬಂತು.

ಈ ಸಂಬಂಧ ಹೋಲ್ಡಿಂಗ್ಸ್‍ನವರಿಗೆ ಯಾವ ದಾಖಲೆಗಳಿವೆ ಎಂದು ಆನ್‍ಲೈನ್ ಮತ್ತು ಆಫ್‍ಲೈನ್ ಮೂಲಕ ಮಾಹಿತಿ ನೀಡುವಂತೆ ಸೂಚಿಸಲಾಗಿತ್ತು. ಇದರಲ್ಲಿ 1800 ಮಂದಿ ಮಾಹಿತಿ ನೀಡಿದ್ದರು. ಅವರಿಗೆ ವೈಯಕ್ತಿಕವಾಗಿ ನೋಟಿಸ್ ನೋಡಿ ಎಫ್‍ಐಆರ್ ದಾಖಲು ಮಾಡಲಾಗಿತ್ತು.
ಇದರಲ್ಲಿ 400 ಮಂದಿ ಸ್ವಯಂಪ್ರೇರಿತವಾಗಿ ಜಾಹಿರಾತುಗಳನ್ನು ತೆರವು ಮಾಡಿದ್ದಾರೆ. ಇನ್ನುಳಿದ 756 ಮಂದಿ ಕಟ್ಟಡ ಮಾಲಿಕರ ವಿರುದ್ಧ ಎಫ್‍ಐಆರ್ ಹಾಕಲಾಗಿದ್ದು,ಎಫ್‍ಐಆರ್ ದಾಖಲಾದ ಮೇಲೆ ಕೆಲವು ಜಾಹಿರಾತು ಫಲಕಗಳನ್ನು ತೆರವುಗೊಳಿಸಿದ್ದಾರೆ.

2016ರಲ್ಲಿ ಅಳವಡಿಸಲಾಗಿದ್ದ ಜಾಹಿರಾತು ಫಲಕಗಳನ್ನು ಅನಧಿಕೃತ ಎಂದು ಘೋಷಿಸಿಲ್ಲ. ಹಾಗಾಗಿ ಅವುಗಳನ್ನು ತೆಗೆಸಲು ತಮಗೆ ಅಧಿಕಾರವಿಲ್ಲ. ಹಾಗಾಗಿ 2016ರಲ್ಲಿ ಅಳವಡಿಸಲಾದ ಫಲಕಗಳನ್ನು ತೆರವುಗೊಳಿಸುವಂತೆ ನ್ಯಾಯಾಲಯ ಅನುಮತಿ ನೀಡಬೇಕೆಂದು ಮನವಿ ಮಾಡಲಾಗುವುದು ಎಂದರು.
ನಗರದಲ್ಲಿ ಉದ್ಭವಿಸಿರುವ ತ್ಯಾಜ್ಯ ನಿರ್ವಹಣೆಗಾಗಿ ಕ್ರಮ ಕೈಗೊಂಡಿದ್ದು, 50 ಕಡೆ ಟ್ರಾನ್ಸ್‍ಫಾರ್ಮೆಷನ್ ಅಳವಡಿಸಲಾಗಿದೆ. ಇದರಿಂದ ಕಸದ ಸಮಸ್ಯೆ ಉದ್ಭವಿಸುವುದಿಲ್ಲ ಸಮರ್ಪಕವಾಗಿ ತ್ಯಾಜ್ಯವನ್ನುವಿಲೇವಾರಿ ಮಾಡಲಾಗುವುದು. ತ್ಯಾಜ್ಯ ವಿಲೇವಾರಿಯಲ್ಲಿ ಇಂಜಿನಿಯರ್‍ಗಳು ನಿರ್ಲಕ್ಷ್ಯ ತೋರಿದರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಎಲ್ಲಾ ಇಂಜಿನಿಯರ್‍ಗಳು ಗಾರೆ ಕೆಲಸದವರಲ್ಲ. ಎರವಲು ಸೇವೆಯಿಂದ ಬಂದವರಲ್ಲಿ ಕೆಲವರು ಕೆಲಸದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಪಾಲಿಕೆಯ ಮೂಲ ಇಂಜಿನಿಯರ್‍ಗಳಲ್ಲೂ ಪ್ರಾಮಾಣಿಕರು ಇದ್ದಾರೆ. ಒಂದು ವೇಳೆ ಸಮರ್ಥರಲ್ಲದ ಇಂಜಿನಿಯರ್‍ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಎರವಲು ಸೇವೆಯಿಂದ ಬಂದಿರುವವರನ್ನು ಅವರ ಮಾತೃ ಇಲಾಖೆಗೆ ವಾಪಸ್ ಕಳುಹಿಸಿಕೊಡಲಾಗುವುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ