ಜೋಗಿ ಸಮುದಾಯ ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರ್ಪಡೆಗೆ ಒತ್ತಾಯ

ಬೆಂಗಳೂರು,ಅ.1- ಜೋಗಿ ಸಮುದಾಯವನ್ನು ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರ್ಪಡೆ ಮಾಡಬೇಕೆಂದು ಅಖಿಲ ಕರ್ನಾಟಕ ಜೋಗಿ ಸಮಾಜ ಅಭಿವೃದ್ಧಿ ಮಹಾಮಂಡಳಿ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಮಂಡಳಿಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಪರಬಳಕರ್ , ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ನಮ್ಮ ಜನಾಂಗ ಹಿಂದುಳಿದಿದ್ದು, ಅಕ್ಷರಸ್ಥರ ಸಂಖ್ಯೆ ಶೇ.0.001ರಷ್ಟು ಇದೆ. ಶೇ.98ರಷ್ಟು ಕುಟುಂಬಗಳಿಗೆ ಮನೆಯಾಗಲಿ, ನಿವೇಶನವಾಗಲಿ ಇಲ್ಲ ಎಂದು ತಿಳಿಸಿದರು.

ಜೋಗಿ ಜನಾಂಗವು ಅಲೆಮಾರಿ, ಅರೆ ಅಲೆಮಾರಿ ಪಟ್ಟಿಯಲ್ಲಿದ್ದು, ಈ ಪಟ್ಟಿಯಲ್ಲಿರುವ ಹಕ್ಕಿಪಿಕ್ಕಿ, ಸುಡಗಾಡು ಸಿದ್ಧ, ಲಂಬಾಣಿ ಮತ್ತು ಇತರ ಜಾತಿಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿಸಿರುವುದು ಸಂತೋಷದ ವಿಷಯವಾಗಿದೆ. ಆದರೆ ಜೋಗಿ ಜಾತಿಯನ್ನುಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿಸದೆ ಜನಾಂಗಕ್ಕೆ ಅನ್ಯಾಯವಾಗಿದೆ ಎಂದರು.
ಮೈಸೂರು ವಿವಿಯ ಪೆÇ್ರ.ಶ್ರೀನಿವಾಸ್‍ಗೌಡ ಅವರ ವರದಿಯನ್ನು ಪರಿಗಣಿಸಿ ಸರ್ಕಾರ ನೀಡುವ ಎಲ್ಲ ಸವಲತ್ತುಗಳನ್ನು ನಮ್ಮ ಜನಾಂಗಕ್ಕೆ ದೊರಕಿಸಿಕೊಡಬೇಕೆಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ