ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಬ್ಬ ಚಪರಾಸಿ ಎಂದ ಸುಬ್ರಮಣಿಯನ್ ಸ್ವಾಮಿ

ಅಗರ್ತಲಾ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಬ್ಬ ಚಪರಾಸಿ. ಅವರದ್ದು ಕೇವಲ ಜವಾನನ ಕೆಲಸ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮಿ, ಪಾಕಿಸ್ತಾನವನ್ನು ಐಎಸ್ಐ ಮತ್ತು ಭಯೋತ್ಪಾದಕರು ನಡೆಸುತ್ತಿದ್ದಾರೆ, ಇಮ್ರಾನ್ ಖಾನ್ ಒಬ್ಬ ಚಪರಾಸಿ ಎಂದು ವಾಗ್ದಾಳಿ ನಡೆಸಿದರು.

ಬಲೋಚಿಗಳಿಗೆ ಪಾಕಿಸ್ತಾನದ ಭಾಗವಾಗಿರಲು ಇಷ್ಟವಿಲ್ಲ, ಸಿಂಧಿಗಳಿಗೂ ಪಾಕಿಸ್ತಾನದ ಜೊತೆ ಇರಲು ಇಷ್ಟವಿಲ್ಲ, ಹೀಗಾಗಿ ಪಾಕಿಸ್ತಾನವನ್ನು ನಾಲ್ಕು ಭಾಗ ಮಾಡುವುದು ಮಾತ್ರ ಪಾಕಿಸ್ತಾನಕ್ಕೆ ಇರುವ ಪರಿಹರವಾಗಿದೆ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದ ಬಗ್ಗೆ ಮಾತನಾಡಿ ತಮ್ಮ ಉಸಿರನ್ನು ವ್ಯರ್ಥ ಮಾಡುವ ಅವಶ್ಯಕತೆ ಇರುವುದಿಲ್ಲ, ಪಾಕಿಸ್ತಾನವನ್ನು ನಿರ್ಲಕ್ಷ್ಯ ಮಾಡಬೇಕು, ನಿಮ್ಮ ಪಾಕಿಸ್ತಾನವನ್ನು ಮಿಲಿಟರಿ ನಾಲ್ಕು ಭಾಗ ಮಾಡಲು ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ