ಪಿ.ವಾಸು ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣಗೆ ರಚಿತಾ ರಾಮ್ ನಾಯಕಿ?

ಬೆಂಗಳೂರು: ದ್ವಾರಕೀಶ್ ಚಿತ್ರ ಬ್ಯಾನರ್​ನ 52ನೇ ಸಿನಿಮಾದಲ್ಲಿ ಸೆಂಚ್ಯುರಿ ಸ್ಟಾರ್ ನಟಿಸುತ್ತಿದ್ದು ದಕ್ಷಿಣ ಭಾರತದ ಖ್ಯಾತ ನಿರ್ದೇಶಕರ ಪಿ,ವಾಸು ನಿರ್ದೇಶಿಸಲಿದ್ದಾರೆ.
ಈ ಹಿಂದೆ ಡಾ, ರಾಜ್ ಕುಮಾರ್ ದ್ವಾರಕೀಶ್ ಚಿತ್ರದ ಬ್ಯಾನರ್ ಗಳಲ್ಲಿ ನಟಿಸಿದ್ದಾರೆ 45 ವರ್ಷಗಳ ನಂತರ ಮತ್ತು  ಶಿವರಾಜ್ ಕುಮಾರ್ ದ್ವಾರಕೀಶ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಡಿಂಪಲ್ ಕ್ವೀನ್ ರಚಿತಾ ರಾಮ್ ಶಿವಣ್ಣಗೆ ನಾಯಕಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಮಾತುಕತೆ ಮುಗಿದಿದ್ದು ಸಹಿ ಮಾಡುವುದಷ್ಟೇ ಬಾಕಿಯಿದೆ, ನಂತರ ನಿರ್ಮಾಪಕರೇ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರುಸ್ತುಂ ಚಿತ್ರದಲ್ಲೂ ರಚಿತಾ ನಟಿಸುತ್ತಿದ್ದು, ಅದರಲ್ಲಿ ವಿವೇಕ್ ಓಬೇರಾಯ್ ಗೆ ನಾಯಕಿಯಾಗಲಿದ್ದಾರೆ.  ಇದೇ ಮೊದಲ ಬಾರಿಗೆ ಶಿವಣ್ಣ ಮತ್ತು ರಚಿತಾ ರಾಮ್ ಕಾಂಬಿನೇಷನ್ ನಲ್ಲಿ ಸಿನಿಮಾ ಮೂಡಿ ಬರಲಿದೆ, ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಶೂಟಿಂಗ್ ಆರಂಭವಾಗಲಿದೆ.
ಇನ್ನೂ ಶಿವರಾಜ್ ಕುಮಾರ್ ಮತ್ತು ವಾಸು 2ನೇ ಬಾರಿಗೆ ಮತ್ತೆ ಒಂದಾಗುತ್ತಿದ್ದಾರೆ, ದ್ವಾರಕೀಶ್​ ಬ್ಯಾನರ್​ನ ಸೂಪರ್​ ಹಿಟ್ ಸಿನಿಮಾ ಆಪ್ತಮಿತ್ರ ಡೈರೆಕ್ಟ್​ ಮಾಡಿದ್ದ, ಪಿ.ವಾಸು ಈಗ ಶಿವಣ್ಣನಿಗೆ ಮತ್ತೆ ಆ್ಯಕ್ಷನ್​ ಕಟ್​ ಹೇಳೊಕೆ ರೆಡಿಯಾಗಿದ್ದಾರೆ. ಈ ಹಿಂದೆ ಪಿ.ವಾಸು ಡೈರೆಕ್ಷನ್​ನಲ್ಲಿ ಶಿವಣ್ಣ ನಟಿಸಿದ್ದ ಶಿವಲಿಂಗ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಈ ಮೆಗಾ ಕಾಂಬಿನೇಷನ್​ ಈಗ ಮತ್ತೆ ಒಂದಾಗಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗೇ ಇಟ್ಟುಕೊಳ್ಳಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ