ಜಗ್ಗೇಶ್ ಅಭಿನಯದ ‘ತೋತಾಪುರಿ’ ಚಿತ್ರಕ್ಕೆ ಆದಿತಿ ಪ್ರಭುದೇವ ನಾಯಕಿ?

ನೀರ್ ದೋಸೆ ಖ್ಯಾತಿಯ ಜೋಡಿ ಜಗ್ಗೇಶ್ ಹಾಗೂ ವಿಜಯ್ ಪ್ರಸಾದ್ ಮತ್ತೆ ಒಂದಾಗಿದ್ದು ಈ ಜೋಡಿ ತೋತಾಪುರಿ ಚಿತ್ರದಲ್ಲಿ ಬ್ಯುಸಿಯಾಗಿದೆ.
ಅದಾಗಲೇ ತೋತಾಪುರಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು ಎರಡನೇ ಹಂತದ ಚಿತ್ರೀಕರಣಕ್ಕೂ ಮುನ್ನ ನಾಯಕಿ ಅಂತಿಮಗೊಳಿಸುವ ಯೋಜನೆಯಲ್ಲಿದೆ ಚಿತ್ರತಂಡ.
ಚಿತ್ರದ ನಾಯಕಿಯಾಗಿ ಕಾವ್ಯಾ ಶೆಟ್ಟಿ ಅವರ ಹೆಸರು ಕೇಳಿಬರುತ್ತಿದೆ. ಈ ಮಧ್ಯೆ ನಿರ್ದೇಶಕರು ಆದಿತಿ ಪ್ರಭುದೇವರನ್ನು ನಾಯಕಿಯಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಹೇಳಲಾಗುತ್ತಿದೆ. ಅದಾಗಲೇ ಚಿತ್ರಕ್ಕಾಗಿ ಹಲವು ನಾಯಕಿಯರ ಆಡಿಷನ್ ನಡೆಸಿದ್ದು ಇನ್ನು ಅಧಿಕೃತ ಘೋಷಣೆಯಷ್ಟೆ ಬಾಕಿ ಇದೆ.
ನಾಗಕನ್ನಿಕೆ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ್ದ ಆದಿತಿ ಅದಾಗಲೇ ಸುನಿ ನಿರ್ದೇಶನದ ಬಜಾರ್ ಚಿತ್ರದಲ್ಲಿ ಅಭಿನಯಿಸಿದ್ದು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇನ್ನು ರಘು ಶಿವಮೊಗ್ಗ ನಿರ್ದೇಶನದ ಕುಸ್ತಿ ಹಾಗೂ ಆಪರೇಷನ್ ನಕ್ಷತ್ರ ಚಿತ್ರಗಳಿಗೂ ಆದಿತಿ ಸಹಿ ಮಾಡಿದ್ದಾರೆ.
ತೋತಾಪುರಿ ಚಿತ್ರವನ್ನು ವಿಜಯ್ ಪ್ರಸಾದ್ ನಿರ್ದೇಶಿಸುತ್ತಿದ್ದು ಕೆಎ ಸುರೇಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ