‘ಲವ್ ರಾತ್ರಿ’ ಬದಲು ‘ಲವ್ ಯಾತ್ರಿ’; ಸಲ್ಮಾನ್ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ ನಿರ್ಮಾಣದ ಅವರ ತಂಗಿಯ ಪತಿ ಆಯುಷ್ ಶರ್ಮ ಮತ್ತು ವರಿನಾ ಹುಸೇನ್ ಅಭಿನಯದ ಲವ್ ರಾತ್ರಿ ಚಿತ್ರ ಶೀರ್ಷಿಕೆಯಿಂದ ಮತ್ತು ಅದರಲ್ಲಿನ ತಾರಾಗಣದಿಂದಾಗಿ ಸುದ್ದಿಯಾಗಿತ್ತು.ಚಿತ್ರದ ಶೀರ್ಷಿಕೆ ಲವ್ ರಾತ್ರಿ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆಯುಂಟುಮಾಡುತ್ತಿದೆ, ಅದನ್ನು ಬದಲಿಸಬೇಕೆಂದು ವಿಶ್ವ ಹಿಂದೂ ಪರಿಷತ್ ನ ಕಾರ್ಯಕರ್ತರು ಆಗ್ರಹಿಸಿದ್ದರು. ಕಳೆದ ವಾರ ಮುಜಾಫರ್ ನ್ಯಾಯಾಲಯ, ಚಿತ್ರದ ಶೀರ್ಷಿಕೆ ಲವ್ ರಾತ್ರಿ ಎಂದು ಇಟ್ಟು ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆಯುಂಟುಮಾಡುತ್ತಿದ್ದಾರೆ ಎಂದು ಸಲ್ಮಾನ್ ಖಾನ್ ಮತ್ತು ಚಿತ್ರತಂಡದ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆದೇಶ ನೀಡಿತ್ತು.ಚಿತ್ರದ ಶೀರ್ಷಿಕೆಗೆ ಪ್ರತಿಭಟನೆ ಮತ್ತು ಕಾನೂನು ಕ್ರಮ ಎದುರಿಸುವ ಭೀತಿ ಎದುರಾಗಿರುವುದರಿಂದ ಚಿತ್ರ ತಯಾರಕರು ಶೀರ್ಷಿಕೆಯನ್ನು ಬದಲಾಯಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸ್ವತಃ ಸಲ್ಮಾನ್ ಖಾನ್ ಅವರೇ ಸ್ಪಷ್ಟಪಡಿಸಿದ್ದು ಲವ್ ರಾತ್ರಿ ಬದಲು ಲವ್ ಯಾತ್ರಿ ಎಂದು ಇಡಲಾಗಿದೆ ಎಂದಿದ್ದಾರೆ.ಲವ್ ಯಾತ್ರಿ ಸಿನಿಮಾ ಅಕ್ಟೋಬರ್ 5ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ