‘ಚಿಟ್ಟಿ ಇಸ್ ಬ್ಯಾಕ್’: ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 2.0 ಚಿತ್ರದ ಟೀಸರ್ ಬಿಡುಗಡೆ

ಮುಂಬೈ: ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಜಂಟಿಯಾಗಿ ಮೊದಲ ಬಾರಿಗೆ ನಟಿಸಿರುವ ಬಹುನಿರೀಕ್ಷಿತ ಚಿತ್ರ 2.0 ಚಿತ್ರ ಟೀಸರ್ ಗುರುವಾರ ಬಿಡುಗಡೆಯಾಗಿದೆ.
ಗಣೇಶ ಚತುರ್ಥಿಯಾದ ಇಂದು ಚಿತ್ರದ ತಂಡ ಬಹುಕೋಟಿ ವೆಚ್ಚ 2.0 ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು, ಈ ಮೂಲಕ ಅಭಿಮಾನಿಗಳಿಗೆ ಹಬ್ಬದ ಉಡುಗೊರೆಯನ್ನು ನೀಡಿದೆ.
ಶಂಕರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ.
2010ರಲ್ಲಿ ಶಂಕರ್ ಅವರೇ ನಿರ್ದೇಶಿಸಿದ್ದ ಎಂದಿರನ್ ಚಿತ್ರ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಮುಂದುವರೆದ ಭಾಗವಾಗಿ 2.0 ಮೂಡಿಬಂದಿದೆ.
ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರು ಖಳನಾಯಕ ಪಾತ್ರದಲ್ಲಿ ಅಭಿನಯಿಸಿದ್ದು, ವಿಭಿನ್ನ ಗೆಟಪ್ ನಲ್ಲಿ ಗಾಣಿಸಿಕೊಂಡಿದ್ದಾರೆ. ರೋಬೋಟ್ ಪಾತ್ರದಲ್ಲಿ ನಾಯಕ ರಜನಿಕಾಂತ್ ಅವರು ಮಿಂಚಿದ್ದು, ಎಂದಿನಂತೆ ಈ ಚಿತ್ರದಲ್ಲಿಯೂ ತಮ್ಮ ಸ್ಟೈಲ್ ತೋರಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ