ಕನ್ನಡಿಗ ಕೆ.ಎಲ್. ರಾಹುಲ್‍ಗೆ ಕ್ರಿಕೆಟ್ ಅಭಿಮಾನಿಗಳಿಂದ ಮಂಗಳಾರತಿ

ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‍ಮನ್ ಕೆ.ಎಲ್. ರಾಹುಲ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.
ಮೊನ್ನೆ ಇಂಗ್ಲೆಂಡ್ ವಿರುದ್ದ ನಡೆದ ನಾಲ್ಕನೆ ಟೆಸ್ಟ್ ಪಂದ್ಯವನ್ನ ಸೋತ ನಂತರ ಕೆ.ಎಲ್. ರಾಹುಲ್ ತಂಡದ ವೇಗಿ ಇಶಾಂತ್ ಶರ್ಮಾಗೆ ಟ್ವಿಟರ್‍ನಲ್ಲಿ ಶುಭಾಶಯ ಕೋರಿದ್ದರು. ಇದನ್ನು ನೋಡಿದ ಕ್ರಿಕೆಟ್ ಅಭಿಮಾನಿಗಳು ಕೆ.ಎಲ್. ರಾಹುಲ್ ವಿರುದ್ಧ ಕಿಡಿ ಕಾರಿದ್ರು. ಪಂದ್ಯ ಸೋತಿದಕ್ಕೆ ನಾಚಿಕೆ ಆಗಲ್ವ. ಕನ್ನಡಿಗ ಕೆ.ಎಲ್.ರಾಹುಲ್ ಆಂಗ್ಲರ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳಿಂ ಗಳಿಸಿದ್ದು 103 ರನ್.ಮುರನೇ ಟೆಸ್ಟ್ ಹೊರತುಪಡಿಸಿ ಮೂರು ಪಂದ್ಯಗಳಲ್ಲೂ ವೈಫಲ್ಯ ಅನುಭವಿಸಿದ್ದಾರೆ. ಈ ಎಲ್ಲ ವೈಫಲ್ಯಗಳ ನಡುವೆ ಮೊನ್ನೆ ಸರಣಿ ಕೈಚೆಲ್ಲಿಕೊಂಡಾಗ ಇಶಾಂತ್ ಶರ್ಮಾಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ