ಏಷ್ಯನ್ ಗೇಮ್ಸ್: ಭಾರತದ ಐತಿಹಾಸಿಕ ಸಾಧನೆ

ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್ ಗೇಮ್ಸ್ 2018 ಕ್ರೀಡಾಕೂಟ ಭಾರಿ ಯಶಸ್ಸನ್ನು ಕಂಡಿದೆ.18ನೇ ಏಷ್ಯನ್ ಗೇಮ್ಸ್ನಲ್ಲಿ ಭಾರತ ಹೊಸ ಇತಿಹಾಸವನ್ನೇ ಬರೆದಿದೆ. 15 ಚಿನ್ನ, 24 ಬೆಳ್ಳಿ ಮತ್ತು 30 ಕಂಚು ಸಹಿತ 69 ಪದಕಗಳನ್ನು ಗೆದ್ದು ಹೊಸ ದಾಖಲೆ ನಿರ್ಮಿಸಿದೆ. 2010ರಲ್ಲಿ 65 ಪದಕ ಜಯಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಆದರೆ, 15 ಚಿನ್ನದ ಪದಕ ಗೆದ್ದಿರುವುದು ಇದು 2ನೇ ಬಾರಿ. ಇದಕ್ಕೂ ಮೊದಲು 1951ರಲ್ಲಿ 15 ಬಂಗಾರದ ಪದಕಗಳಿಗೆ ಭಾರತ ಒಡೆಯನಾಗಿತ್ತು.
ಸಮಾರೋಪ ಸಮಾರಂಭದಲ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿದು ಮುನ್ನಡೆಯುವ ಅದೃಷ್ಟ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಅವರಿಗೆ ದೊರಕಿತು.
ಇಂಡೋನೇಷ್ಯಾದ ಜಕಾರ್ತ ಹಾಗೂ ಪ್ಯಾಲೆಂಬಾಂಗ್ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018 ಕ್ರೀಡಾಕೂಟದಲ್ಲಿ ಭಾರತೀಯ ಪುರುಷ ಹಾಕಿ ತಂಡವು ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ.

ಪುರುಷರ ಹಾಕಿ ವಿಭಾಗದಲ್ಲಿ ಶನಿವಾರ ಸಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ 2-1ರ ಗೋಲುಗಳ ಅಂತರದ ಗೆಲುವು ದಾಖಲಿಸಿದ ಭಾರತ ತಂಡವು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.
ಬಾಕ್ಸಿಂಗ್ ವಿಭಾಗದಲ್ಲಿ ಏಕೈಕ ಚಿನ್ನದ ಪದಕ
ಭಾರತಕ್ಕೆ ಬಾಕ್ಸಿಂಗ್ ವಿಭಾಗದಲ್ಲಿ ಏಕೈಕ ಚಿನ್ನದ ಪದಕ ದೊರಕಿದೆ. ಕ್ರೀಡಾಕೂಟದ 14ನೇ ದಿನವಾದ ಶನಿವಾರದಂದು ಪುರುಷರ 49 ಕೆ.ಜಿ ವಿಭಾಗದಲ್ಲಿ ಅಮಿತ್ ಪಂಗಲ್ಅಮೋಘ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ಫೈನಲ್ ಪಂದ್ಯದಲ್ಲಿ ಒಲಿಂಪಿಕ್ ಹಾಗೂ ಏಷ್ಯನ್ ಚಾಂಪಿಯನ್ ಹಸನ್ಬಾಯ್ ದುಶ್ಮಟೋವ್ ವಿರುದ್ಧ 3-2ರ ಅಂತರದಲ್ಲಿ ಗೆಲುವು ದಾಖಲಿಸಿದ 22ರ ಹರೆಯದ ಅಮಿತ್ ದೇಶದ ಕೀರ್ತಿ ಪತಾಕೆ ಹಾರಿಸಿದರು.
ಕ್ರೀಡಾಕೂಟದ 14ನೇ ದಿನವಾದ ಶನಿವಾರದಂದು ಪುರುಷರ ಬ್ರಿಜ್(ಒಂದು ರೀತಿಯ ಇಸ್ಪೀಟಿನ ಆಟ) ಕ್ರೀಡೆಯಲ್ಲಿ ಭಾರತದ ಪ್ರಣಬ್ ಬರ್ಧನ್ ಹಾಗೂ ಶಿಬ್ನಾಥ್ ಸರ್ಕಾರ್ ಚಿನ್ನದ ಪದಕ ಗೆದ್ದಿದ್ದಾರೆ.
ಬಾಕ್ಸಿಂಗ್ನಲ್ಲಿ ಭಾರತದ ಪದಕ ನಿರೀಕ್ಷೆಯಾಗಿರುವ ವಿಕಾಸ್ ಕೃಷ್ಣನ್ಅಭಿಮಾನಿಗಳನ್ನು ನಿರಾಸೆಗೊಳಿಸಿಲ್ಲ.

ಆದರೆ ದುರದೃಷ್ಟವೆಂಬಂತೆ ಸೆಮಿಫೈನಲ್ನಲ್ಲಿ ಆಡಲು ಫಿಟ್ ಎಲ್ಲ ಎಂದು ವೈದ್ಯಕೀಯ ತಂಡ ಘೋಷಿಸಿರುವಂತೆಯೇ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್ಗಳು ಭರ್ಜರಿ ಪ್ರದರ್ಶನವನ್ನು ಮುಂದುವರಿಸಿದ್ದಾರೆ.

ಕ್ರೀಡಾಕೂಟದ 12ನೇ ದಿನವಾದ ಗುರುವಾರದಂದು ಮಹಿಳೆಯರ 4×400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತ ಚಿನ್ನ ಗೆದ್ದುಕೊಂಡಿದೆ.

ಭಾರತದ ಪರ ಓಟಕ್ಕಿಳಿದ ಹಿಮಾ ದಾಸ್, ಎಂಆರ್ ಪೂವಮ್ಮ, ಎಸ್ ಗಾಯಕ್ವಾಡ್ ಮತ್ತು ಮಿಸ್ಮಯ ಕೊರೊತ್ ಚಿನ್ನದ ಮಾಲೆಯನ್ನು ಕೊರಳಿಗೆ ಹಾಕಿಕೊಂಡರು.
ಕ್ರೀಡಾಕೂಟದ 15ನೇ ದಿನವಾದ ಶನಿವಾರದಂದು ಮಹಿಳೆಯರ ತಂಡ ವಿಭಾಗದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ 0-2ರ ಅಂತರದಲ್ಲಿ ಸೋಲು ಅನುಭವಿಸಿದ ಭಾರತೀಯ ಮಹಿಳಾ ತಂಡವು ಹಿನ್ನಡೆ ಅನುಭವಿಸಿತು.
ಕ್ರೀಡಾಕೂಟದ ಮಹಿಳಾ ಹಾಕಿ ವಿಭಾಗದಲ್ಲಿ ಭಾರತೀಯ ತಂಡ ಬೆಳ್ಳಿ ಪದಕ ಗೆದ್ದುಕೊಂಡಿದೆ.

ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಜಪಾನ್ ವಿರುದ್ಧ 1-2ರ ಗೋಲುಗಳ ಅಂತರದಲ್ಲಿ ಮಣಿದ ಭಾರತ ತಂಡವು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಅನೇಕ ಅವಕಾಶಗಳನ್ನು ಕೈಚೆಲ್ಲಿದ ಭಾರತೀಯ ತಂಡ ಅಂತಿಮವಾಗಿ ಹಿನ್ನಡೆ ಅನುಭವಿಸಬೇಕಾಯಿತು.
ಇದು ಏಷ್ಯನ್ ಗೇಮ್ಸ್ನಲ್ಲಿ ಸ್ವರ್ಣ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ತೇಜಿಂದರ್ ಪಾಲ್ (23) ಅವರ ಕರುಣಾಜನಕ ಕಥೆ. ಆಗಸ್ಟ್ 25ರಂದು ನಡೆದ ಕಬ್ಬಿಣದ ಚೆಂಡು (ಶಾಟ್ ಪುಟ್) ಎಸೆಯುವ ಸ್ಪರ್ಧೆಯ ಫೈನಲ್ನಲ್ಲಿ ತೇಜಿಂದರ್ ಪಾಲ್ ತೂರ್ 20.75 ಮೀ. ದೂರ ಎಸೆಯುವ ಮೂಲಕ ಚಿನ್ನದ ಪದಕಗೆದ್ದುಕೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ