ಅಕ್ಕ ಸಮ್ಮೇಳನದಲ್ಲಿ ‘ಮಿಸ್ಸಿಂಗ್ ಬಾಯ್’ ಟೀಸರ್ ರಿಲೀಸ್ ಮಾಡಲಿರುವ ಪುನೀತ್

ಬೆಂಗಳೂರು:  ‘ಮಿಸ್ಸಿಂಗ್ ಬಾಯ್’ ಚಿತ್ರದ ಟೀಸರ್ ಇದೇ ಸೆಪ್ಟೆಂಬರ್ 2ರಂದು ಅಮೇರಿಕಾದ ಟೆಕ್ಸಾಸ್ ನಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪುನೀತ್ ರಾಜ್‌ ಕುಮಾರ್ ಬಿಡುಗಡೆ ಮಾಡಲಿದ್ದಾರೆ.
ನಿರ್ದೇಶಕ ರಘುರಾಮ್ ಡಿ.ಪಿ ಈ ಸಲ ನೈಜಘಟನೆಯನ್ನು ಆಧರಿಸಿ ‘ಮಿಸ್ಸಿಂಗ್ ಬಾಯ್’ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ.
ಈಗಾಗಲೇ ಬಹುತೇಕ ಸಿನಿಮಾ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದೆ.
ಈ ಚಿತ್ರಕ್ಕೆ ನಾಯಕನಾಗಿ ‘ಫಸ್ಟ್ ರಾಂಕ್ ರಾಜು’ ಗುರುನಂದನ್ ಅಭಿನಯಿಸಿದ್ದು, .
ಮಲಯಾಳಂನ ಹಲವು ಸಿನಿಮಾ ಹಾಗೂ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಅರ್ಚನಾ, ‘ಮಿಸ್ಸಿಂಗ್ ಬಾಯ್’ ಮೂಲಕ ಮೊದಲ ಬಾರಿಗೆ ಚಂದನವನಕ್ಕೆ ಪ್ರವೇಶ ಪಡೆದಿದ್ದಾರೆ.
ನಟ ಪವರ್ ಸ್ಟಾರ್ ಪುನೀತ್ ರಾಜ್ ​ಕುಮಾರ್ ಈ ಸಮ್ಮೇಳನದ ಮುಖ್ಯಅತಿಥಿಯಾಗಿ ಭಾಗವಹಿಸುತ್ತಿದ್ದು, ಅವರಿಂದಲೇ ‘ಕವಲುದಾರಿ’ಮತ್ತು ‘ಮಿಸ್ಸಿಂಗ್ ಬಾಯ್’ ಟೀಸರ್ ಬಿಡುಗಡೆಗೊಳ್ಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ