ಏಷ್ಯನ್ ಗೇಮ್ಸ್: ಬಾಕ್ಸರ್ ಅಮೀತ್ ಪಾಂಗಲ್,ಕಂಚಿಗೆ ತೃಪ್ತಿಪಟ್ಟ ಪುರುಷರ ಹಾಕಿ

ಜಕಾರ್ತ: ಬಾಕ್ಸರ್ ಅಮೀತ್ ಪಾಂಗಲ್, ಬ್ರಿಡ್ಜ್ ವಿಭಾಗದಲ್ಲಿ ಭಾರತ ಪುರುಷ ತಂಡಕ್ಕೆ ಚಿನ್ನ ಭಾರತ ಹಾಕಿ ತಂಡ ಪಾಕ್ ವಿರುದ್ಧ ಸೆಮಿಫೈನಲ್‍ನಲ್ಲಿ 2-1 ಅಂತರದಲ್ಲಿ ಕಂಚು ಪಡೆದು ಭಾರತ ಒಟ್ಟು 14ನೆ ದಿನದ ವೇಳಗೆ 15 ಚಿನ್ನ, 24 ಬೆಳ್ಳಿ 30 ಕಂಚು ಪಡೆದು ಒಟ್ಟು 69 ಪದಕಗಳನ್ನ ಪಡೆದಿದೆ.
ಪುರುಷರ 49 ಕೆ.ಜಿ ವಿಭಾಗದಲ್ಲಿ ಅಮಿತ್ ಪಂಗಲ್ ಅಮೋಘ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಫೈನಲ್ ಪಂದ್ಯದಲ್ಲಿ ಒಲಿಂಪಿಕ್ ಹಾಗೂ ಏಷ್ಯನ್ ಚಾಂಪಿಯನ್ ಹಸನ್ಬಾಯ್ ದುಶ್ಮಟೋವ್ ವಿರುದ್ಧ 3-2ರ ಅಂತರದಲ್ಲಿ ಗೆಲುವು ದಾಖಲಿಸಿದ 22ರ ಹರೆಯದ ಅಮಿತ್ ದೇಶದ ಕೀರ್ತಿ ಪತಾಕೆ ಹಾರಿಸಿದರು.
ಸ್ಕ್ವಾಷ್ ತಂಡವು ಫೈನಲ್ನಲ್ಲಿ ಮುಗ್ಗರಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಕ್ರೀಡಾಕೂಟದ 15ನೇ ದಿನವಾದ ಶನಿವಾರದಂದು ಮಹಿಳೆಯರ ತಂಡ ವಿಭಾಗದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ 0-2ರ ಅಂತರದಲ್ಲಿ ಸೋಲು ಅನುಭವಿಸಿದ ಭಾರತೀಯ ಮಹಿಳಾ ತಂಡವು ಹಿನ್ನಡೆ ಅನುಭವಿಸಿತು.
ಪುರುಷರ ಬ್ರಿಜ್(ಒಂದು ರೀತಿಯ ಇಸ್ಪೀಟಿನ ಆಟ) ಕ್ರೀಡೆಯಲ್ಲಿ ಭಾರತದ ಪ್ರಣಬ್ ಬರ್ಧನ್ ಹಾಗೂ ಶಿಬ್ನಾಥ್ ಸರ್ಕಾರ್ ಚಿನ್ನದ ಪದಕ ಗೆದ್ದಿದ್ದಾರೆ.
ಪುರುಷರ ಹಾಕಿ ವಿಭಾಗದಲ್ಲಿ ಶನಿವಾರ ಸಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ 2-1ರ ಗೋಲುಗಳ ಅಂತರದ ಗೆಲುವು ದಾಖಲಿಸಿದ ಭಾರತ ತಂಡವು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ