ಎನ್ ಡಿಎ ಮೈತ್ರಿಕೂಟ ತೊರೆಯುವರೇ ನಿತೀಶ್ ಕುಮಾರ್…?

ಪಟ್ನಾ : ಲೊಕಸಭಾ ಚುನಾವಣೆಗೆ ಜೆಡಿಯು ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ನಡುವೆ ನಡೆದಿರುವ ಸೀಟು ಹೊಂದಾಣಿಕೆ ಬಗ್ಗೆ ಜೆಡಿಯು ಮುಖ್ಯಸ್ಥ , ಸಿಎಂ ನಿತೀಶ್‌ ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಸೀಟು ಹಂಚಿಕೆಯಲ್ಲಿ ಅಸಮಾಧಾನ ಮೂಡಿದಲ್ಲಿ ನಿತೀಶ್ ನೇತೃತ್ವದ ಜೆಡಿಯು ಎನ್ ಡಿ ಎ ಮೈತ್ರಿ ಕೂಟದಿಂದ ಹೊರಬರಲಿದ್ದಾರೆ ಎನ್ನಲಾಗುತ್ತಿದೆ.

ಒಂದೊಮ್ಮೆ ನಿತೀಶ್‌ ಅವರ ಜೆಡಿಯು, ಎನ್‌ಡಿಎ ಕೂಟದಿಂದ ಹೊರ ಬಂದು ಏಕಾಕಿಯಾಗಿ ಚುನಾವಣೆಯನ್ನು ಹೋರಾಡುವ ಸಾಧ್ಯತೆ ಎಂದು ತಿಳಿದುಬಂದಿದೆ. ಹಾಗಾದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆ ದೊಡ್ಡ ಸಂಕಷ್ಟವೇ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ.

ಇತ್ತೀಚೆಗಷ್ಟೇ ಬಿಹಾರದಲ್ಲಿ ಎನ್‌ಡಿಎ – ಜೆಡಿಯು ಸೀಟು ಹೊಂದಾಣಿಕೆ ಅಂತಿಮಗೊಂಡಿತ್ತು. ಆ ಪ್ರಕಾರ ಬಿಹಾರದ ಒಟ್ಟು 40 ಸೀಟುಗಳಲ್ಲಿ 20 ಸೀಟುಗಳನ್ನು ಬಿಜೆಪಿ ತನ್ನಲ್ಲಿ ಉಳಿಸಿಕೊಂಡು 12 ಸೀಟುಗಳನ್ನು ಜೆಡಿಯುಗೆ ಬಿಟ್ಟುಕೊಟ್ಟಿತ್ತು. 5 ಸೀಟುಗಳನ್ನು ಲೋಕ ಜನಶಕ್ತಿ ಪಾರ್ಟಿಗೆ ಕೊಡಲಾಗಿತ್ತು. ಎನ್‌ಡಿಎ ಭಾಗವಾಗಿ ಒಂದೊಮ್ಮೆ ರಾಷ್ಟೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ) ಸ್ಪರ್ಧಿಸಲು ಬಯಸಿದರೆ ಅದಕ್ಕೆ ಎರಡು ಸೀಟುಗಳನ್ನು ಬಿಜೆಪಿ ಕೋಟಾದಿಂದ ಕೊಡುಲಾಗುವುದು ಎಂದು ತೀರ್ಮಾನಿಸಲಾಗಿತ್ತು.

ಆದರೆ ಸೀಟು ಹಂಚಿಕೆ ತೀರ್ಮಾನಕ್ಕೆ ಮೊದಲು ಬಿಹಾರದಲ್ಲಿ ಎನ್‌ಡಿಎ ಮತ್ತು ಜೆಡಿಯು ಸಮಾನ ಸಂಖ್ಯೆಯಲ್ಲಿ (20 : 20) ಸೀಟು ಹಂಚಿಕೊಳ್ಳಲಿವೆ ಎಂದು ತಿಳಯಲಾಗಿತ್ತು. ಆದರೆ ಅದೀಗ 20 : 12ಕ್ಕೆ ಬಂಧಿರುವುದು ನಿತೀಶ್‌ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಎನ್‌ಡಿಎ ಕೂಟದಿಂದ ಹೊರಬರಲಿ ರುವ ಜೆಡಿಯು ಮತ್ತೆ ಮಹಾ ಘಟಬಂಧನವನ್ನು ಸೇರಿಕೊಳ್ಳಲಿದೆ ಎಂಬ ಮಾತೂ ಕೇಳಿಬರುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ