ನಗರದ ವಿವಿಧ ವಾರ್ಡ್‍ಗಳ ಮತದಾರರ ಪಟ್ಟಿಯಲ್ಲಿ ಹೆಸರುಗಳು ನಾಪತ್ತೆ

ತುಮಕೂರು, ಆ.31- ನಗರದ ವಿವಿಧ ವಾರ್ಡ್‍ಗಳ ಮತದಾರರ ಪಟ್ಟಿಯಲ್ಲಿ ಹೆಸರುಗಳು ನಾಪತ್ತೆಯಾಗಿದ್ದು, ಮತದಾನ ಮಾಡಲು ಅವಕಾಶ ಕೊಡಿ ಇಲ್ಲವೆ ಮತದಾನ ನಿಲ್ಲಿಸಿ ಎಂದು ಸಾರ್ವಜನಿಕರು ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.
ನಗರದ 24,25,26ನೆ ವಾರ್ಡ್‍ಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರುಗಳು ನಾಪತ್ತೆಯಾಗಿದ್ದವು. ಕಳೆದ ವಿಧಾನಸಬೆ ಚುನಾವಣೆಯಲ್ಲಿ ನಾವು ಮತ ಚಲಾವಣೆ ಮಾಡಿದ್ದೆವು. ಆಗ ನಮ್ಮ ಹೆಸರಿತ್ತು. ಆದರೆ, ಪಾಲಿಕೆ ಚುನಾವಣೆಯಲ್ಲಿ ನಮ್ಮ ಹೆಸರುಗಳೇ ನಾಪತ್ತೆಯಾಗಿವೆ. ನಾವು ಬೆಳಗ್ಗೆಯೇ ಮತದಾನ ಮಾಡಲು ಉತ್ಸಾಹದಿಂದ ಬಂದಿದ್ದೆವು. ಆದರೆ, ನಿಮ್ಮ ಹೆಸರಿಲ್ಲ ಎಂದು ಸಿಬ್ಬಂದಿಗಳು ತಿಳಿಸಿದಾಗ ಆಕ್ರೋಶಗೊಂಡ ಸಾರ್ವಜನಿಕರು ಚುನಾವಣಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
29ನೆ ವಾರ್ಡ್‍ನಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಮತದಾರರಿದ್ದು, ಪ್ರಮುಖ ಪಕ್ಷಗಳು ಮತದಾರರನ್ನು ಓಲೈಸಲು ಭಾರೀ ಕಸರತ್ತು ನಡೆಸುತ್ತಿದ್ದ ದೃಶ್ಯಗಳು ಕಂಡುಬಂದವು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ