ನಾಲೆಗೆ ಹಾರಿ ಮಹಿಳೆ ಹಾಗೂ ಯುವಕ ಆತ್ಮಹತ್ಯೆ

ನಂಜನಗೂಡು,ಆ.31- ನಾಲೆಗೆ ಹಾರಿ ಮಹಿಳೆ ಹಾಗೂ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ತಾಲ್ಲೂಕಿನ ಕಾಯ್ರ್ಯಾ ಗ್ರಾಮದ ಮಣಿಯಮ್ಮ(40) ಮತ್ತು ಸಿದ್ದರಾಜು(20) ಆತ್ಮಹತ್ಯೆ ಮಾಡಿಕೊಂಡವರು.
ಮಹದೇವಪ್ಪ ಎಂಬುವರ ಪತ್ನಿಯಾದ ಮಣಿಯಮ್ಮ ಹಾಗೂ ಕಾಲೇಜು ವಿದ್ಯಾರ್ಥಿಯಾದ ಸಿದ್ದರಾಜು ನಿನ್ನೆ ಸಂಜೆ ಕಬಿನಿ ಬಲದಂಡೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸಬ್‍ಇನ್‍ಸ್ಪೆಕ್ಟರ್ ರವಿಶಂಕರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ನುರಿತ ಈಜು ತಜ್ಞರಿಂದ ಇಬ್ಬರ ಶವಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ