ಏಷ್ಯನ್ ಗೇಮ್ಸ್ 2018: ಬಾಕ್ಸಿಂಗ್ ಫೈನಲ್ ಪ್ರವೇಶಿಸಿದ ಅಮಿತ್, ಭಾರತಕ್ಕೆ ಮತ್ತೊಂದು ಪದಕದ ಭರವಸೆ!

ಜಕಾರ್ತಾ: 18 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಫೈನಲ್ ತಲುಪಿದ ಏಕೈಕ ಭಾರತೀಯ ಬಾಕ್ಸರ್ ಆಗಿರುವ ಅಮಿತ್ ಪಂಘಲ್ (49 ಕೆ.ಜಿ). ಫಿಲಿಪೈನ್ಸ್ ನ ಕಾರ್ಲೋ ಪಾಲಮ್ ಅವರನ್ನು ಮಣಿಸಿ ಈ ಸಾಧನೆ ಮಾಡಿದ್ದಾರೆ.
ಶುಕ್ರವಾರ ನಡೆದ ಸೆಮಿಫೈನಲ್ಸ್ ಹಣಾಹಣಿಯಲ್ಲಿ ಅಮಿತ್ ಜಯಗಳಿಸಿದ್ದು ಕನಿಷ್ಟ ಬೆಳ್ಳಿ ಪದಕವನ್ನು ಖಚಿತ ಪಡಿಸಿಕೊಂಡಿದ್ದಾರೆ.
ಹರಿಯಾಣದ ಅಮಿತ್ ಈ ವರ್ಷಾರಂಭದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸಹ ಪಾಲ್ಗೊಂಡು ಬೆಳ್ಳಿ ಪದಕ ಗಳಿಸಿಕೊಂಡಿದ್ದರು.
ಇನ್ನು ಇಂದು ಬೆಳಿಗ್ಗೆ ಭಾರತದ ಇನ್ನೋರ್ವ ಭರವಸೆಯ ಬಾಕ್ಸರ್ ವಿಕಾಸ್ ಕ್ರಿಶನ್ (75 ಕೆಜಿ) ಕಣ್ಣಿನ ಗಾಯದ ಸಮಸ್ಯೆ ಇದ್ದ ಕಾರಣ ನಾಲ್ಕರ ಘಟ್ಟದಿಂದ ಹಿಂದೆ ಸರಿದು ಕಂಚಿನ ಪದಕ ಗಳಿಸಿಕೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ