ಧೋನಿ ಹುಡುಗರಿಗೆ ಸ್ಲಿಪ್ ಕ್ಯಾಚಿಂಗ್ ಡ್ರಿಲ್: ಧವನ್ ರಿವೀಲ್

India's captain Virat Kohli, right, and his team attend a nets session at The AGEAS Bowl, Southampton, south England, Tuesday Aug. 28, 2018. (Steven Paston/PA via AP)

ಸೌಥ್‍ಹ್ಯಾಂಪ್ಟನ್: ಮೊನ್ನೆ ಅಂಗ್ಲರ ವಿರುದ್ದ ಟೀಂ ಇಂಡಿಯಾ ಫೀಲ್ಡರ್‍ಗಳು ಸ್ಲಿಪ್‍ನಲ್ಲಿ ಭರ್ಜರಿಯಾಗಿ ಕ್ಯಾಚ್ ಹಿಡಿದು ಮಿಂಚಿದ್ದರು. ಇದಕ್ಕೆ ಕಾರಣ ಏನೆಂಬುದನ್ನ ಇದಕ್ಕೆ ಕಾರಣ ಏನೆಂಬುದನ್ನ ಶಿಖರ್ ಧವನ್ ರಿವೀಲ್ ಮಾಡಿದ್ದಾರೆ.
ಸ್ಲಿಪ್ ಕ್ಯಾಚಿಂಗ್ ಟೀಂ ಇಂಡಿಯಾದ ಬಹುದೊಡ್ಡ ಸಮಸ್ಯೆ. ಇದು ಆಂಗ್ಲರ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲೂ ಕಾಡುತ್ತಿದೆ. ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸ್ಲಿಪ್ ಫೀಲ್ಡರ್‍ಗಳು ಕ್ಯಾಚ್‍ಗಳನ್ನ ಕೈಚೆಲ್ಲಿ ಪಂದ್ಯವನ್ನ ಸೋಲುವಂತೆ ಮಾಡಿದ್ದರು.
ಆದರೆ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 203 ರನ್‍ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಫೀಲ್ಡರ್‍ಗಳು ಕಠಿಣ ಕ್ಯಾಚ್‍ಗಳನ್ನ ಹಿಡಿದು ಪಂದ್ಯ ಗೆಲ್ಲಿಸಿವುಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸ್ಲಿಪ್‍ನಲ್ಲಿ ಕೆ.ಎಲ್. ರಾಹುಲ್ ಮತ್ತು ರಿಷಬ್ ಪಂತ್ ತಲಾ ಆರು ಕ್ಯಾಚ್‍ಗಳನ್ನ ಹಿಡಿದು ಮಿಂಚಿದ್ದರು.
ಮೂರನೇ ಟೆಸ್ಟ್ ಗೂ ಮುನ್ನ ತಂಡದ ಕೋಚ್ ಶ್ರೀಧರ್ ಕೊಹ್ಲಿ ಹುಡುಗರಿಗೆ ಸ್ಲಿಪ್ ಕ್ಯಾಚಿಂಗ್ ಕುರಿತು ಡ್ರಿಲ್ ಮಾಡಿದ್ದರು. ಡ್ರಿಲ್ ನಲ್ಲಿ ಆಟಗಾರರು ಮತ್ತು ಶ್ರೀಧರ್ ನಡುವೆ ಬೋರ್ಡ್‍ವೊಂದನ್ನ ಇಟ್ಟು ಅಭ್ಯಾಸದ ಡ್ರಿಲ್ ನಡೆದಿತ್ತು. ಈ ಡ್ರಿಲ್‍ನಲ್ಲಿ ಫೀಲ್ಡ್‍ರ್‍ಗಳು ತಮ್ಮ ಕೈಗೊಳ್ಳೊಂದಿಗೆ ಕಣ್ಣಿನ ನಂಟಿಟ್ಟುಕೊಳ್ಳದೇ ಅಭ್ಯಾಸ ಮಾಡಿದ್ರು. ಇದು ನಮಗೆ ಸಹಾಯವಾಯಿತೆಂದು ಟ್ವಟರ್‍ನಲ್ಲಿ ಧವನ್ ಹೇಳಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ