ಆಂಗ್ಲರ ವಿರುದ್ದ ಗೆಲ್ಲಲು ಕೊಹ್ಲಿ ಪಡೆ ಮುಂದೆ ನಾಲ್ಕು ಮಂತ್ರಗಳು

NOTTINGHAM, ENGLAND - AUGUST 21: Jasprit Bumrah of India holds up the ball after taking a five wicket haul during day four of the Specsavers 3rd Test match between England and India at Trent Bridge on August 21, 2018 in Nottingham, England. (Photo by Gareth Copley/Getty Images)
ಇಂದಿನಿಂದ ಆಂಗ್ಲರ ವಿರುದ್ದ ಆರಂಭವಾಗಲಿರುವ ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಬೇಕಿದ್ದಲ್ಲಿ ನಾಲ್ಕು ಅಂಶಗಳನ್ನ ಮನದಲ್ಲಿಟ್ಟುಕೊಂಡು ಆಡಬೇಕು. ಆ ಅಂಶಗಳು ಯಾವುದು ಅನ್ನೋದನ್ನ ನಾವ್ ತೋರಿಸ್ತೀವಿ ನೋಡಿ

ಸಾಲಿಡ್ ಓಪನಿಂಗ್ ಕೊಡಬೇಕು ಓಪನರ್ಸ್‍ಗಳು
ಆಂಗ್ಲರ ನೆಲದಲ್ಲಿ ಟೀಂ ಇಂಡಿಯಾದ ಓಪನರ್‍ಗಳು ಕಠಿಣ ಸವಾಲನ್ನ ಎದುರಿಸಿದ್ದಾರೆ. ಆಂಗ್ಲರ ಕಂಡೀಷನ್‍ಗಳು ಓಪನರ್‍ಗಳನ್ನ ಸವಾಲಿಗೆ ಒಡ್ಡಿವೆ. ಸ್ವಿಂಗ್ ಮತ್ತು ಸೀಮ್ ಬೌಲಿಂಗ್
ಆಂಗ್ಲರ ವಿರುದ್ಧ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಟಾಪ್ ಆರ್ಡರ್‍ನಲ್ಲಿ ಭಾರೀ ಸಮಸ್ಯೆ ಎದುರಿಸಿತು. ಮೊದಲ ಟೆಸ್ಟ್ ಪಂದ್ಯದಲ್ಲಿ ಓಪನರ್‍ಗಳಾಗಿ ಶಿಖರ್ ಧವನ್ ಮತ್ತು ಮುರಳಿ ವಿಜಯ್ ಅವರನ್ನ ಓಪನರ್‍ಗಳಾಗಿ ಕಣಕ್ಕಿಳಸಲಾಯಿತು. ಎರಡನೇ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್. ರಾಹುಲ್‍ಗೆ ಅವಕಾಶ ಕೊಟ್ಟು ಧವನ್‍ರನ್ನ ಬೆಂಚ್‍ನಲ್ಲಿ ಕುರಿಸಿದ್ರೂ. ಮೂರನೇ ಟೆಸ್ಟ್ ಗೆ ಮುರಳಿ ವಿಜಯ್‍ಗೆ ಕೋಕ್ ಕೊಟ್ಟು ಮತ್ತೆ ದವನ್‍ಗೆ ಅವಕಾಶ ನೀಡಲಾಯಿತು.
ಟೀಂ ಇಂಡಿಯಾದ ಸ್ಟೈಲಿಸ್ ಪ್ಲೇಯರ್ ಮುರಳಿ ವಿಜಯ್‍ಗೆ ವಯಸ್ಸು ಆಡಲು ಬಿಡುತ್ತಿಲ್ಲ. ರನ್‍ಗಳಿಸಲು ಪರದಾಡುತ್ತಿರುವ ಮುರಳಿ ವಿಜಯ್‍ಗಿಂತ ತಂಡದ ಯುವ ಬ್ಯಾಟ್ಸ್‍ಮನ್‍ಗಳು ಒಳ್ಳೆಯ ಪರ್ಫಾಮನ್ಸ್ ನೀಡುತ್ತಿದ್ದಾರೆ. ಮೊನ್ನೆ ನಾಟಿಂಗ್ಯಾಮ್ ಟೆಸ್ಟ್ ಪಂದ್ಯದಲ್ಲಿ ಧವನ್ ಮತ್ತು ಕೆ.ಎಲ್. ರಾಹುಲ್ ಆಡಿದ ಎರಡೂ ಇನ್ನಿಂಗ್ಸ್ ಗಳಲ್ಲೂ 60 ರನ್‍ಗಳ ಜೊತೆಯಾಟ ನೀಡಿ ತಂಡಕ್ಕೆ ಪರ್ವಾಗಿಲ್ಲ ಎನ್ನುಷ್ಟರ ಮಟ್ಟಿಗೆ ಒಳ್ಳೆಯ ಓಪನಿಂಗ್ ಕೊಟ್ಟಿದ್ದಾರೆ. ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ಈ ಇಬ್ಬರು ಬ್ಯಾಟ್ಸ್‍ಮನ್‍ಗಳಿಂದ ಇನ್ನಷ್ಟು ನಿರೀಕ್ಷಿಸಲಾಗುತಿದೆ.
ಸ್ಲಿಪ್‍ನಲ್ಲಿ ಕ್ಯಾಚ್ ಕೈಚೆಲ್ಲಬಾರದು ಸ್ಲಿಪ್ ಫೀಲ್ಡರ್‍ಗಳು
ಹಲವಾರು ವರ್ಷಗಳಿಂದ ಟೀಂಇಂಡಿಯಾ ಟೆಸ್ಟ್ ನಲ್ಲಿ ಒಂದು ಸಮಸ್ಯೆಯಿಂದ ಬಳಲುತ್ತಿತ್ತು. ಅದು ಸ್ಲಿಪ್‍ನಲ್ಲಿ ಫೀಲ್ಡಿರ್‍ಗಳು ಕ್ಯಾಚ್‍ಗಳನ್ನ ಕೈಚೆಲ್ಲೋದು. ಅದರಲ್ಲೂ ವಿದೇಶದಲ್ಲಿ ಟೀಂ ಇಂಡಿಯಾ ಫೀಲ್ಡ್‍ರ್‍ಗಳು ಕ್ಯಾಚ್‍ಗಳನ್ನ ಕೈಚೆಲ್ಲಿ ಅದೆಷ್ಟೊ ಪಂದ್ಯಗಳನ್ನ ಸೋತಿದ್ದಾರೆ. ಕ್ಯಾಚ್ ಕೈಚೆಲ್ಲುವ ಚಾಳಿ ಆಂಗ್ಲರ ವಿರುದ್ಧ ಸರಣಿಯಲ್ಲು ಮುಂದುವರೆದಿತ್ತು. ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಸ್ಲಿಪ್‍ನಲ್ಲಿ ಕ್ಯಾಚ್ ಮೇಲೆ ಕ್ಯಾಚ್‍ಗಳನ್ನ ಕೈಚೆಲ್ಲಿ ಪಂದ್ಯಗಳನ್ನ ಸೋತಿತ್ತು. ಇದಕ್ಕೆ ಭಾರೀ ಟೀಕೆಗಳು ಕೇಳಿ ಬಂದಿದ್ದವು.
ನಂತರ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ಲಿಪ್‍ನಲ್ಲಿ ಸ್ಲಿಪ್ ಫೀಲ್ಡ್‍ರ್‍ಗಳು ಕಮಾಲ್ ಮಾಡಿದ್ರು. ಆಂಗ್ಲ ಬ್ಯಾಟ್ಸ ಮನ್‍ಗಳು ನೀಡಿದ್ದ ಕ್ಯಾಚ್‍ಗಳನ್ನ ಸಾಲಿಡ್ ಆಗಿ ಹಿಡಿದು ಎಲ್ಲರ ಗಮನ ಸೆಳೆದಿದ್ದಾರೆ.
ಇದಕ್ಕೆ ಕಾರಣ ಕೋಚ್ ಶ್ರೀಧರ್ ತಂಡದ ಸ್ಲಿಪ್ ಫೀಲ್ಡರ್‍ಗಳಿಗೆ ಚೆನ್ನಾಗಿ ತರಬೇತಿ ನೀಡಿದ್ದಾರೆ. ಇದರ ಪರಿಣಾಮವೇ ಮೂರನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಗೆಲ್ಲುವಂತಾತಯಿತು. ಕನ್ನಡಿಗ ಕೆ.ಎಲ್. ರಾಹುಲ್ ಎರಡೂ ಇನ್ನಿಂಗ್ಸ್‍ಗಳಲ್ಲಿ 6 ಕ್ಯಾಚ್‍ಗಳನ್ನ ಹಿಡಿದ್ರು ಮಿಂಚಿದ್ರು. ನಾಲ್ನೆ ಟೆಸ್ಟ್ ಪಂದ್ಯದಲ್ಲೂ ಇದೇ ಪರ್ಫಾಮನ್ಸ್ ನ್ನೆ ಮುಂದುವರೆಸಬೇಕಿದೆ.
ರನ್ ಮಳೆ ಸುರಿಸಬೇಕು ಮಿಡ್ಲ್‍ಸ್ಲಾಟ್ ಬ್ಯಾಟ್ಸ್ ಮನ್‍ಗಳು
ಆಂಗ್ಲರ ವಿರುದ್ಧ ಸರಣಿ ಆರಂಭವಾದಗಿನಿಂದಲೂ ಬ್ಯಾಟಿಂಗ್ ವಿಭಾಗದಲ್ಲಿ ಇಡೀ ತಂಡ ಕ್ಯಾಪ್ಟನ್ ಕೊಹ್ಲಿಯನ್ನ ನೆಚ್ಚಿಕೊಂಡಿದೆ. ಮೊದಲ ಟೆಸ್ಟ್ ನಲ್ಲಿ ನಾಯಕ ಕೊಹ್ಲಿ ಏಕಾಂಗಿ ಹೋರಾಟ ನಡೆಸಿದ್ರು. ನಂತರ ಮೂರನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 97 ಮತ್ತು 103 ರನ್ ಬಾರಿಸಿದ್ರು.
ಕ್ಯಾಪ್ಟನ್ ಕೊಹ್ಲಿಗೆ ಮಧ್ಯಮ ಕ್ರಮಾಂಕದಲ್ಲಿ ಇನ್ನು ತಂಡದ ಬ್ಯಾಟ್ಸ್ ಮನ್‍ಗಳಿಂದ ಉತ್ತಮ ಸಾಥ್ ಸಿಗುತ್ತಿಲ್ಲ. ಮೂರನೇ ಟೆಸ್ಟ್ ನಲ್ಲಿ ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ ಪೂಜರ ಮತ್ತು ಅಜಿಂಕ್ಯ ರಹಾನೆ ಚೆನ್ನಾಗಿ ಆಡಿದ್ರು ಆದರೆ ಇವರಿಬ್ಬರಿಗೂ ಇನ್ನೂ ದೊಡ್ಡ ಇನ್ನಿಂಗ್ಸ್ ಕಟ್ಟುವ ತಾಕತ್ತು ಹೊಂದಿದ್ದಾರೆ.
ಇನ್ನು ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‍ನಲ್ಲಿ ಶೈನ್ ಆಗುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಮಿಂಚಿದ್ದ ರಿಷಬ್ ಪಂತ್ ಒಳ್ಳೆಯ ಬ್ಯಾಟಿಂಗ್ ಮಾಡಬೆಕಿದೆ.
ನೋ ಬಾಲ್ ಹಾಕುವ ಚಾಳಿಯನ್ನ ಕೈಬಿಡಬೇಕ ಬೌಲರ್‍ಗಳು
ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಲ್ಕನೆ ದಿನವೇ ಟೀಂ ಇಂಡಿಯಾ ಗೆದ್ದು ಬಿಡುತ್ತಿತ್ತು. ಆದರೆ ತಂಡದ ಡೆತ್ ಓವರ್‍ಸ್ಪಶಲಿಸ್ಟ್ ಜಸ್‍ಪ್ರೀತ್ ಬೂಮ್ರಾ ಹಾಕಿದ ನೋ ಬಾಲ್‍ನಿಂದಾಗಿ ಗೆಲುವಿಗೆ ಇನನೊಂದು ದಿನ ಕಾಯಬೇಕಾಯಿತು. ಜಸ್‍ಪ್ರೀತ್ ಬೂಮ್ರಾ ಅವರ ದೊಡ್ಡ ವೀಕ್ನೆಸ್ ಅಂದ್ರೆ ಕ್ರೂಶಿಯಲ್ ಟೈಮ್‍ನಲ್ಲಿ ನೋ ಬಾಲ್ ಹಾಕಿ ದೊಡ್ಡ ಯಡವಟ್ಟು ಮಾಡಿಕೊಳ್ಳುತ್ತಾರೆ. ಇದು ಮೊನ್ನೆ ಅದಿಲ್ ರಶೀದ್ ಅವರನ್ನ ಔಟ್ ಮಾಡಿದಾಗಲೂ ಪ್ರೂವ್ ಆಯ್ತು. ಇಶಾಂತ್ ಶರ್ಮಾ ಕೂಡ 3ನೇ ಟೆಸ್ಟ್ ಪಂದ್ಯದಲ್ಲಿ ನೋ ಬಾಲ್ ಹಾಕಿದ್ದು ಇದನ್ನ ಈ ಇಬ್ಬರು ಬೌಲರ್‍ಗಳು ತಡೆಯಬೇಕಿದೆ.
ಒಟ್ಟಾರೆ ಇಂದಿನಿಂದ ಆಂಗ್ಲರ ವಿರುದ್ಧ ನಡೆಯಲಿರುವ ನಾಲ್ಕನೆ ಟೆಸ್ಟ್ ಪಂದ್ಯಗಳಲ್ಲಿ ಈ ನಾಲ್ಕು ಅಂಶಗಳನ್ನ ಫಾಲೋ ಮಾಡಿದ್ದೆ ಆದಲ್ಲಿ ಕೊಹ್ಲಿ ಪಡೆ ಸರಣಿ ಸಮಬಲ ಮಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ