ಏಷ್ಯನ್ ಗೇಮ್ಸ್: ಶ್ರೀಲಂಕಾ ವಿರುದ್ಧ ಭಾರತಕ್ಕೆ 20-0 ಅಂತರದ ಭರ್ಜರಿ ಗೆಲುವು!

ಜಕಾರ್ತಾ: ಏಷ್ಯನ್ ಗೇಮ್ಸ್ ನ ಪುರುಷರ ವಿಭಾಗದ ಹಾಕಿ ತಂಡ ಮತ್ತೊಂದು ಸಾಧನೆ ಮಾಡಿದ್ದು ಶ್ರೀಲಂಕಾ ವಿರುದ್ಧ 20-೦ ಅಂತರದ ಭರ್ಜರಿ ಗೆಲುವು ಸಾಧಿಸಿದೆ.
ತಂಡ ಲಂಕಾ ತಂಡದ ವಿರುದ್ಧ ಅದ್ಭುತ ಆಟ ಪ್ರದರ್ಶಿಸಿರುವ ಭಾರತೀಯ ತಂಡ ಸೆಮಿ ಫೈನಲ್ಸ್  ನಲ್ಲಿ ಮಲೇಷ್ಯಾ ವಿರುದ್ಧ ಸೆಣೆಸಲಿದೆ. ಲಂಕಾ ವಿರುದ್ಧದ ಭರ್ಜರಿ ಗೆಲುವಿನ ಮೂಲಕ ಎಲ್ಲಾ 5 ಪಂದ್ಯಗಳನ್ನು ಗೆದ್ದಿರುವ ಭಾರತ ಪೂಲ್ ಎ ವಿಭಾದಲ್ಲಿ ಅಗ್ರಸ್ಥಾನದಲ್ಲಿದ್ದು, ಪೂಲ್ ಬಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮಲೇಷ್ಯಾ ವಿರುದ್ಧ ಮೊದಲ ಸೆಮಿ ಫೈನಲ್ಸ್ ಪಂದ್ಯವನ್ನಾಡಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ